ADVERTISEMENT

ಗಣಿ ಅಸ್ತ್ರ ಬಿಟ್ಟ ಪರಿಕ್ಕರ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಪಣಜಿ (ಪಿಟಿಐ): ಬಾಂಬೆ ಐಐಟಿ ಪದವೀಧರರಾದ 56 ವರ್ಷದ ಮನೋಹರ್ ಪರಿಕ್ಕರ್ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಅಣಿಯಾಗುತ್ತಿದ್ದಾರೆ. ಶುದ್ಧ ವರ್ಚಸ್ಸು ಮತ್ತು ಅಭಿವೃದ್ಧಿಪರ ರಾಜಕಾರಣಕ್ಕೆ ಹೆಸರಾದವರು.
 
ತಮ್ಮ ಒರಟು ಮಾತಿನಿಂದಾಗಿ ಹಲವೊಮ್ಮೆ ವಿನಾಕಾರಣ ಸುದ್ದಿಯಾದದ್ದೂ ಉಂಟು. ಅಕ್ರಮ ಗಣಿಗಾರಿಕೆ ವಿಷಯವನ್ನು ಕೈಗೆತ್ತಿಕೊಂಡು ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಅವರು ಮೊಳಗಿಸಿದ ಕಹಳೆ, ಬಿಜೆಪಿಗೆ ಜಯ ತಂದು ಕೊಡುವಲ್ಲಿ ಯಶಸ್ವಿಯಾಗಿದೆ.

ಜನರೊಡನೆ ಸುಲಭವಾಗಿ ಬೆರೆಯಬಲ್ಲ ಗುಣದಿಂದಾಗಿ ಜನರ ನಾಡಿ ಮಿಡಿತ ಬಲ್ಲ ವ್ಯಕ್ತಿ ಎಂದೂ ಗುರುತಿಸಿಕೊಂಡಿದ್ದಾರೆ.

2000ನೇ ಇಸವಿಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ, ರಾಜ್ಯವೊಂದರ ಮುಖ್ಯಸ್ಥರಾದ ಮೊತ್ತಮೊದಲ ಐಐಟಿ ಪದವೀಧರ ಎಂಬ ಹೆಮ್ಮೆಗೂ ಪಾತ್ರರಾಗಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.