ADVERTISEMENT

ಗಣಿ ಮಾಫಿಯಾದಿಂದ ಹತ್ಯೆ ಯತ್ನ: ಮಹಿಳಾ ತಹಶೀಲ್ದಾರ್ ಪಾರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ದೇವಾಸ್ (ಮಧ್ಯಪ್ರದೇಶ) (ಪಿಟಿಐ): ಐಪಿಎಸ್ ಅಧಿಕಾರಿಯ ಹತ್ಯೆ ಮೂಲಕ ಅಟ್ಟಹಾಸ ಮೆರೆದಿದ್ದ ಮಧ್ಯ ಪ್ರದೇಶದ ಗಣಿ ಮಾಫಿಯಾ, ಮಹಿಳಾ ತಹಶೀಲ್ದಾರ್ ಮೇಲೆ ವಾಹನ ಹರಿಸಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ದೇವಾಸ್ ಜಿಲ್ಲೆಯ ಕುಸುಮಾನಿಯಾ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳದ ಪರಿಶೀಲನೆಗೆ ಬುಧವಾರ ತೆರಳಿದ್ದ ಕಣ್ಣೊಡ್ ತಹಶೀಲ್ದಾರ್ ಮೀನಾ ಪಾಲ್ ಅವರ ಮೇಲೆ ಮಣ್ಣೆತ್ತುವ ವಾಹನ (ಜೆಸಿಬಿ) ಹರಿಸುವ ಯತ್ನ ನಡೆಯಿತು. ಇದನ್ನು ಅರಿತ ಅಧಿಕಾರಿ ಪಕ್ಕಕ್ಕೆ ನೆಗೆದು ಪ್ರಾಣ ಉಳಿಸಿಕೊಂಡರು ಎನ್ನಲಾಗಿದೆ.

ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಪೊಲೀಸ್ ಠಾಣೆಗೆ ತೆರಳಿ ಸ್ಥಳೀಯ ಬಿಜೆಪಿ ಧುರೀಣ ದಾರಾಸಿಂಗ್ ಪಟೇಲ್, ವಾಹನ ಚಾಲಕ ನರೇಂದ್ರ ಯಾದವ್ ಮತ್ತು ಇತರ ಐವರ ವಿರುದ್ಧ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಿಂದ ಯಂತ್ರೋಪಕರಣ ಹಾಗೂ ವಾಹನಗಳನ್ನು ವಶಪಸಿಕೊಂಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.