ADVERTISEMENT

ಗಾಯಕಿ ಗಿರಿಜಾ ದೇವಿ ನಿಧನ

ಪಿಟಿಐ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಗಾಯಕಿ ಗಿರಿಜಾ ದೇವಿ ನಿಧನ
ಗಾಯಕಿ ಗಿರಿಜಾ ದೇವಿ ನಿಧನ   

ಕೋಲ್ಕತ್ತ: ಖ್ಯಾತ ಶಾಷ್ಟ್ರೀಯ ಸಂಗೀತ ಗಾಯಕಿ, ಬನಾರಸ್‌ ಘರಾನಾ ವಿದುಷಿ ಗಿರಿಜಾ ದೇವಿ(88) ಅವರು ಇಲ್ಲಿನ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಠುಮ್ರಿ’ಯ ರಾಣಿ ಎಂದೇ ಕರೆಸಿಕೊಂಡಿದ್ದ ಇವರು ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದರು. ಅವರಿಗೆ ಮಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT