ADVERTISEMENT

ಗಾಯತೊಂಡೆ ಕಲಾಕೃತಿ: ₨23 ಕೋಟಿಗೆ ಮಾರಾಟ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ಮುಂಬೈ (ಪಿಟಿಐ): ಅಂತರರಾಷ್ಟ್ರೀಯ ಹರಾಜು ಸಂಸ್ಥೆ   ಕ್ರಿಸ್ಟಿ ಇದೇ ಮೊದಲ ಭಾರಿಗೆ ದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಸಿದ್ದು,  ದೇಶದ ಖ್ಯಾತ ಚಿತ್ರ ಕಲಾವಿದ ವಿ.ಎಸ್‌. ಗಾಯತೊಂಡೆ ಅವರ ಅಮೂರ್ತ ಕಲಾಕೃತಿ ₨23.7 ಕೋಟಿಗೆ (3.7 ಮಿಲಿಯನ್‌ ಡಾಲರ್‌)  ಹರಾಜಾಗುವ ಮೂಲಕ ನೂತನ ವಿಶ್ವ ದಾಖಲೆ ನಿರ್ಮಿಸಿದೆ.

ಕಲಾಕೃತಿಗಳ ಹರಾಜಿನಿಂದ ₨ 96 ಕೋಟಿ ಸಂಗ್ರಹವಾಗಿದೆ. ಇದು ನಿರೀಕ್ಷಿತ ಮೊತ್ತಕ್ಕಿಂತಲೂ ಹೆಚ್ಚಿನ ಪ್ರಮಾಣದ್ದು.

ಗಾಯತೊಂಡೆ ಅವರ ಹಿಂದಿ ಸಹಿಯುಳ್ಳ 1979ರಲ್ಲಿ ಅವರೇ ಬಿಡಿಸಿದ್ದ ತೈಲ ವರ್ಣ ಚಿತ್ರ ಅಮೆರಿಕದ ವ್ಯಕ್ತಿಯೊಬ್ಬರ ಪಾಲಾಗಿದೆ. ಅವರು ದೂರವಾಣಿ ಮೂಲಕವೇ ಹರಾಜಿನಲ್ಲಿ ಪಾಲ್ಗೊಂಡಿದ್ದರು.

ಒಟ್ಟು 81 ಕಲಾಕೃತಿಗಳ ಪೈಕಿ 79 ಹರಾಜಿನಲ್ಲಿ ಮಾರಾಟವಾಗಿವೆ. ನಿಜಕ್ಕೂ ಇದು ‘ಅಸಾಮಾನ್ಯವಾದುದು’ ಎಂದು ಕ್ರಿಸ್ಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವನ್‌ ಮರ್ಫಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.