ADVERTISEMENT

ಗುಂಡಿನ ಕಿಕ್ ಇನ್ನು ಸ್ವಲ್ಪ ಕಡಿವೆು!

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST

ನವದೆಹಲಿ (ಪಿಟಿಐ): ಇನ್ನು ಮುಂದೆ ಬಿಯರ್, ವೈನ್, ವಿಸ್ಕಿ, ರಂ, ಜಿನ್ ಹಾಗೂ ವೋಡ್ಕಾಗಳಲ್ಲಿನ ಆಲ್ಕೋಹಾಲ್ ಪ್ರಮಾಣ ನಿಯಂತ್ರಿಸಲಾಗುತ್ತದೆ.

ಆಹಾರ ಸುರಕ್ಷೆ ಹಾಗೂ ಮಾನದಂಡ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದೇ ಮೊದಲ ಬಾರಿ ಇಂಥ್ದ್ದದೊಂದು ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ಕರಡು ಮಾನದಂಡವನ್ನು ಅಂತಿಮಗೊಳಿಸಿದೆ.ಇವುಗಳಲ್ಲಿ ಆಲ್ಕೋಹಾಲ್‌ನ ಗರಿಷ್ಠ ಅನುಮೋದಿತ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ. ಅಲ್ಲದೇ ಇವುಗಳಲ್ಲಿ ಸುರಕ್ಷಾ ಮಾನದಂಡ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಕರಡು ಮಾನದಂಡ ಕುರಿತು ಅಂತಿಮ ಸುತ್ತಿನ ಚರ್ಚೆ ನಡೆಸಲಾಗುತ್ತದೆ. ಜುಲೈ 1ಕ್ಕೆ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ.

 ಉದ್ದೇಶಿತ ಕ್ರಮವು ದೇಶದಲ್ಲಿ ಮಾರಾಟ ಮಾಡಲು ಪರವಾನಗಿ ಪಡೆದುಕೊಂಡಿರುವ ಎಲ್ಲ ಬ್ರಾಂಡ್ ಆಲ್ಕೋಹಾಲ್ ಉತ್ಪನ್ನಗಳಿಗೂ ಅನ್ವಯವಾಗಲಿದೆ.ಪ್ರಾಧಿಕಾರದ ವೈಜ್ಞಾನಿಕ ಸಮಿತಿಯು ಕರಡು ಮಾನದಂಡಕ್ಕೆ ಈಗಾಗಲೇ ಅನುಮೋದನೆ ನೀಡಿದೆ.

ಈಗಿರುವ ಆಲ್ಕೋಹಾಲ್ ಮಟ್ಟ
ವಿಸ್ಕಿ, ರಂ, ಜಿನ್ ಅಥವಾ ವೋಡ್ಕಾದಲ್ಲಿ ಗರಿಷ್ಠ ಶೇ 45.5ರಷ್ಟು, ವೈನ್ ಮತ್ತು ಬಿಯರ್‌ನಲ್ಲಿ ಶೇ 8ರಷ್ಟು ಆಲ್ಕೋಹಾಲ್ ಮಟ್ಟಕ್ಕೆ ಅನುಮತಿ ಇದೆ.
 

ಮದ್ಯ ತಯಾರಕರ ಅನಿಸಿಕೆ ಏನು?
ಮದ್ಯದಲ್ಲಿ ಆಲ್ಕೋಹಾಲ್ ಮಟ್ಟ ನಿಯಂತ್ರಿಸುವ ಅಧಿಕಾರವು ಎಫ್‌ಎಸ್‌ಎಸ್‌ಎಐಗೆ ಇಲ್ಲ. ಈ ಅಧಿಕಾರ ಏನಿದ್ದರೂ ರಾಜ್ಯ ಸರ್ಕಾರಗಳಿಗೆ ಮಾತ್ರವೇ ಇದೆ.

ADVERTISEMENT

ಮಾರಾಟದ ಮೇಲೆ ಪರಿಣಾಮ?
ಈ ಕ್ರಮವು ಆಲ್ಕೋಹಾಲ್ ಉದ್ದಿಮೆಯ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯಗಳಿಗೆ ಪ್ರಮುಖವಾಗಿ ವರಮಾನ ತಂದುಕೊಡುವ ಈ ಉದ್ದಿಮೆಯು ವಾರ್ಷಿಕವಾಗಿ ್ಙ50ಸಾವಿರ ಕೋಟಿ ಗಿಂತಲೂ ಹೆಚ್ಚು ವಹಿವಾಟು ನಡೆಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.