ADVERTISEMENT

‘ಗುಜರಾತ್‌ ಚುನಾವಣೆಗೆ ರಾಹುಲ್‌ ಹೊಸ ಆಶಾಕಿರಣ’

ಪಿಟಿಐ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST

ಹೈದರಾಬಾದ್‌ : ‘ಗುಜರಾತ್‌ ಚುನಾವಣೆಯಲ್ಲಿ ಪಕ್ಷವು ಜಯಭೇರಿ ಬಾರಿಸಲು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅತ್ಯುತ್ತಮ ಆಶಾಕಿರಣವಾಗಿದ್ದಾರೆ’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

‘ಗುಜರಾತ್‌ನಲ್ಲಿ ರಾಹುಲ್‌ ವ್ಯಾಪಕ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಗುಜರಾತ್‌ ಮೂಲತಃ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ರಾಹುಲ್‌ ಅವರ ನಾಯಕತ್ವದಲ್ಲಿ ಈ ಬಾರಿ ಮತ್ತೆ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಿಮಾಚಲ ಪ್ರದೇಶ ಚುನಾವಣೆ ಪರಿಶೀಲನಾ ಸಮಿತಿ ರಚನೆ

ADVERTISEMENT

ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್‌ ಶುಕ್ರವಾರ ಮೂವರು
ಸದಸ್ಯರನ್ನೊಳಗೊಂಡ ಪರಿಶೀಲನಾ ಸಮಿತಿ ರಚಿಸಿದೆ.

ಮಾಜಿ ಸಂಸದ ಜಿತೇಂದ್ರ ಸಿಂಗ್‌ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಎಲ್ಲ 68 ವಿಧಾನಸಭಾ ಕ್ಷೇತ್ರಗಳಿಗೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಮಿತಿ ಪರಿಶೀಲನೆ ನಡೆಸಲಿದೆ. ಬಳಿಕ ಪಟ್ಟಿ ಸಿದ್ಧಪಡಿಸಿ ಪಕ್ಷದ ರಾಜ್ಯ ಚುನಾವಣಾ ಸಮಿತಿಯ ಅನುಮೋದನೆಗೆ ಸಲ್ಲಿಸಲಿದೆ.

ಕೃತಕ ಅಂಗಾಂಗ ಬೇರ್ಪಡಿಸಿ ತಪಾಸಣೆ ಇಲ್ಲ

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗಾಗಿ ಅಂಗವಿಕಲ ಪ್ರಯಾಣಿಕರ ಕೃತಕ ಅಂಗಾಂಗಗಳನ್ನು ಬೇರ್ಪಡಿಸಿ ಅಥವಾ ಗಾಲಿ
ಕುರ್ಚಿಯಿಂದ ಅವರನ್ನು ಎಬ್ಬಿಸಿಪರೀಕ್ಷೆಗೊಳಪಡಿಸುವ ‘ಅಮಾನವೀಯ’ ಪದ್ಧತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕೈಬಿಡಲಿದೆ.

ತಪಾಸಣೆಗಾಗಿ ಸ್ಫೋಟಕ ಪತ್ತೆ ಉಪಕರಣ (ಇಟಿಡಿ) ಹಾಗೂ ವೀಕ್ಷಣಾ ವ್ಯವಸ್ಥೆ ವಿಧಾನಗಳನ್ನು ಬಳಸಲಾಗುತ್ತದೆ ಎಂದು ಸಿಐಎಸ್‌ಎಫ್ ಪ್ರಧಾನ ನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.

‘ವಿಮಾನ ನಿಲ್ದಾಣಗಳಲ್ಲಿ ಅಂಗವಿಕಲ ಪ್ರಯಾಣಿಕರು ಅವಮಾನಅನುಭವಿಸಬಾರದು ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ’ ಎಂದು ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.