ADVERTISEMENT

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 10:35 IST
Last Updated 3 ಅಕ್ಟೋಬರ್ 2012, 10:35 IST

ನವದೆಹಲಿ (ಪಿಟಿಐ): ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭೆಯ ಚುನಾವಣೆ ಕುರಿತಂತೆ  ಕೇಂದ್ರ ಚುನಾವಣಾ ಆಯೋಗವು ಬುಧವಾರ ದಿನಾಂಕಗಳನ್ನು ಪ್ರಕಟಿಸಿದೆ.
 
ಗುಜರಾತ್ ವಿಧಾನಸಭೆಗೆ 2 ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮೊದಲ ಹಂತದ ಮತದಾನವು ಡಿಸೆಂಬರ್ 13 ರಂದು ಹಾಗೂ ಎರಡನೇಯ ಹಂತದ ಮತದಾನವು ಡಿಸೆಂಬರ್ 17 ರಂದು ನಡೆಯಲಿದೆ.

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯು ನವೆಂಬರ್ 4ರಂದು ನಡೆಯಲಿದ್ದು, ಈ ಎರಡು ವಿಧಾನ ಸಭೆಗಳ ಮತ ಎಣಿಕೆ ಕಾರ್ಯವು ಡಿಸೆಂಬರ್ 20 ರಂದು ನಡೆಯಲಿದೆ.
 
ಈ ಎರಡು ವಿಧಾನಸಭೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಕ್ಟೋಬರ್ 10 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅ.17 ರಂದು ನಾಮಪತ್ರ ಸಲ್ಲಿಕೆಯ ಕೊನೆ ಹಾಗೂ ಅ.20 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.