ADVERTISEMENT

ಗುರುವಾರ ನವದೆಹಲಿಗೆ ಹಿಂತಿರುಗಿದ ಸೋನಿಯಾ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 5:50 IST
Last Updated 8 ಸೆಪ್ಟೆಂಬರ್ 2011, 5:50 IST
ಗುರುವಾರ ನವದೆಹಲಿಗೆ ಹಿಂತಿರುಗಿದ ಸೋನಿಯಾ
ಗುರುವಾರ ನವದೆಹಲಿಗೆ ಹಿಂತಿರುಗಿದ ಸೋನಿಯಾ   

ನವದೆಹಲಿ, (ಪಿಟಿಐ): ಕಾಯಿಲೆಯೊಂದರ ಚಿಕಿತ್ಸೆಗಾಗಿ ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಬೆಳಿಗ್ಗೆ ರಾಜಧಾನಿಗೆ ಹಿಂತಿರುಗಿದ್ದಾರೆ.

~ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಳಿಗ್ಗೆ ಹಿಂತಿರುಗಿದ್ದು, ಅವರು ಸೌಖ್ಯವಾಗಿದ್ದಾರೆ~ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ತ್ರಿವೇದಿ ಅವರು ಗುರುವಾರ ಇಲ್ಲಿ ತಿಳಿಸಿದ್ದಾರೆ.

ಸೋನಿಯಾ ಅವರ ನಿವಾಸ ಜನಪಥ್ 10ರ ಮೂಲಗಳು ಸೋನಿಯಾ ಅವರು ಸದ್ಯಕ್ಕೆ ಯಾರನ್ನೂ ಭೇಟಿ ಮಾಡುವುದಿಲ್ಲವೆಂದು ಹೇಳಿವೆ.

ADVERTISEMENT

ಕಳೆದ ತಿಂಗಳು ಆ 2 ರಂದು ವಿದೇಶಕ್ಕೆ ತರೆಳಿದ್ದ 64 ವರ್ಷದ  ಸೋನಿಯಾ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರು ವಿದೇಶಕ್ಕೆ ತೆರಳುತ್ತಿದ್ದಂತೆಯೇ, ಸೋನಿಯಾ ಅವರಿಗೆ ಆರೋಗ್ಯದ ಸಮಸ್ಯೆ ಇದ್ದು, ಅದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ಸಲಹೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.

ಸೋನಿಯಾ ಅವರ ಅನುಪಸ್ಥತಿಯಲ್ಲಿ  ಅವರ ಮಗ ರಾಹುಲ್ ಗಾಂಧಿ, ಹಿರಿಯ ನಾಯಕರಾದ ಎ.ಕೆ. ಆಂಟನಿ, ಅಹಮದ್ ಪಟೇಲ್ ಮತ್ತು ದ್ವಿವೇದಿ ಅವರನ್ನು ಒಳಗೊಂಡ ನಾಲ್ವರ ತಂಡಕ್ಕೆ ಪಕ್ಷದ ಉಸ್ತುವಾರಿ ವಹಿಸಲಾಗಿತ್ತು. ತಾಯಿಯೊಂದಿದ್ದ ರಾಹುಲ್ ಗಾಂಧಿ ಈಚೆಗೆ ಸ್ವದೇಶಕ್ಕೆ ಹಿಂತಿರುಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.