ADVERTISEMENT

ಗೋಮಾಂಸ ಎನ್ನಲಾದ 700ಕೆ.ಜಿ ಮಾಂಸ ವಶಕ್ಕೆ ಪಡೆದ ಪೊಲೀಸರು

ಏಜೆನ್ಸೀಸ್
Published 4 ಜುಲೈ 2017, 12:51 IST
Last Updated 4 ಜುಲೈ 2017, 12:51 IST
ಗೋಮಾಂಸ ಎನ್ನಲಾದ 700ಕೆ.ಜಿ ಮಾಂಸ ವಶಕ್ಕೆ ಪಡೆದ ಪೊಲೀಸರು
ಗೋಮಾಂಸ ಎನ್ನಲಾದ 700ಕೆ.ಜಿ ಮಾಂಸ ವಶಕ್ಕೆ ಪಡೆದ ಪೊಲೀಸರು   

ಮುಂಬೈ: ಟೆಂಪೋದಲ್ಲಿ ಸಾಗಿಸುತ್ತಿದ್ದ 700ಕೆಜಿ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಡ್ರೈವರ್‌ ಹಾಗೂ ಆತನ ಸಹಾಯಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇಲ್ಲಿನ ಗೋವಂಡಿ ಪ್ರದೇಶದ ಶಿವಾಜಿನಗರದಲ್ಲಿ ರಸ್ತೆಬದಿಯಲ್ಲಿ ಟೆಂಪೋ ನಿಲ್ಲಿಸಲಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ವಾಹನವನ್ನು ತಪಾಸಣೆಗೊಳಪಡಿಸಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

‘ಮಾರಾಟದ ಉದ್ದೇಶಕ್ಕಾಗಿ ಮಾಂಸವನ್ನು ರಾಯಗಡ ಜಿಲ್ಲೆಯ ಪಾನ್ವೆಲ್‌ ನಗರದಿಂದ ತರಲಾಗಿದೆ ಎಂದು ತಿಳಿದು ಬಂದಿದೆ. ಅದು ಗೋಮಾಂಸವೇ ಅಥವಾ ಬೇರೆಯದ್ದೇ ಎಂಬುದನ್ನು ತಿಳಿಯಲು ಮಾಂಸದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ’ ಎಂದು ಪೊಲೀಸ್‌ ಉಪ ಆಯುಕ್ತ ಸಹಾಜಿ ಉಮಾಪ್‌ ಹೇಳಿದ್ದಾರೆ.

ADVERTISEMENT

‘ಚಾಲಕ ಹಾಗೂ ಆತನ ಸಹಾಯಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ವಶಕ್ಕೆ ಪಡೆಯಲಾಗಿರುವ ಮಾಂಸವನ್ನು ವಿಲೇವಾರಿ ಮಾಡಲು ನಗರಸಭೆಗೆ ಒಪ್ಪಿಸಲಾಗಿದೆ. ಮಾಂಸ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಪ್ರಾಣಿ ರಕ್ಷಣೆ ಕಾನೂನಿನ ಪ್ರಕಾರ ರಾಜ್ಯದಲ್ಲಿ ಜಾನುವಾರು ವಧೆಯನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.