ADVERTISEMENT

ಗೋಮಾಂಸ ಸೇವಿಸಿ ವಿಶೇಷ ಅಧಿವೇಶನಕ್ಕೆ ಹಾಜರಾದ ಕೇರಳ ಶಾಸಕರು

ಏಜೆನ್ಸೀಸ್
Published 8 ಜೂನ್ 2017, 7:24 IST
Last Updated 8 ಜೂನ್ 2017, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಹತ್ಯೆಗಾಗಿ ಜಾನುವಾರು ಮಾರಾಟ ಮಾಡುವುದನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿಯಮದ ಬಗ್ಗೆ ಚರ್ಚಿಸಲು ಕೇರಳ ವಿಧಾನಸಭೆಯಲ್ಲಿ ಗುರುವಾರ ಬೆಳಿಗ್ಗೆ ವಿಶೇಷ ಅಧಿವೇಶನ ಆರಂಭಿಸಲಾಗಿದೆ. ಅನೇಕ ಶಾಸಕರು ವಿಧಾನಸೌಧದ ಕ್ಯಾಂಟೀನಿನಲ್ಲಿ ಗೋಮಾಂಸ ಸೇವಿಸಿ ಅಧಿವೇಶನಕ್ಕೆ ಹಾಜರಾಗಿದ್ದಾರೆ.

ಸಾಮಾನ್ಯವಾಗಿ 11 ಗಂಟೆ ನಂತರ ಮಾತ್ರವೇ ಕ್ಯಾಂಟೀನಿನಲ್ಲಿ ಗೋಮಾಂಸದಿಂದ ಸಿದ್ಧಪಡಿಸಿದ ಆಹಾರ ನೀಡಲಾಗುತ್ತದೆ. ಆದರೆ, ಗುರುವಾರ ವಿಶೇಷ ಅಧಿವೇಶನ ಇದ್ದುದರಿಂದ ಮುಂಜಾನೆಯೇ ಗೋಮಾಂಸ ತಂದು ಆಹಾರ ಸಿದ್ಧಪಡಿಸಲಾಗಿದೆ. ಅಧಿವೇಶನಕ್ಕೆ ತೆರಳುವ ಮುನ್ನ ಅನೇಕ ಶಾಸಕರು ಗೋಮಾಂಸ ಸೇವಿಸಿದ್ದಾರೆ ಎಂದು ಕ್ಯಾಂಟೀನಿನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ದೇವಿಕುಳಂನ ಸಿಪಿಎಂ ಶಾಸಕ ಎಸ್‌. ರಾಜೇಂದ್ರನ್ ಅವರಿಗೆ ಮೊದಲು ಗೋಮಾಂಸದ ಫ್ರೈ ನೀಡಲಾಯಿತು ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.