ADVERTISEMENT

ಚಂಡೀಗಢ: ಬಾಂಗ್ಲಾದೇಶಿ ಪ್ರಜೆಗಳ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 8:15 IST
Last Updated 19 ಜೂನ್ 2012, 8:15 IST

ಚಂಡೀಗಢ, (ಐಎಎನ್ಎಸ್): ಹರಿಯಾಣದ ಗೋರೆಗಾಂವ್ ಪ್ರದೇಶದಲ್ಲಿ ಕಳೆದ ವರ್ಷಗಳಿಂದ ಕಾನೂನು ಬಾಹಿರವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು  ಮಂಗಳವಾರ ತಿಳಿಸಿದ್ದಾರೆ.

ಬಂಧಿತರನ್ನು ಮೊಹಮ್ಮದ್ ಮಿಲನ್ ಮತ್ತು ಜಮೀಲ್ ಎಂದು ಗುರುತಿಸಲಾಗಿದ್ದು, ಇವರಲ್ಲಿ ಒಬ್ಬನು ನರಸಿಂಗ್ ಪುರ್ ಹಾಗೂ ಮತ್ತೊಬ್ಬನು ಗೊರೆಗಾಂವ್ ನ ಬಾಸಯ್ ಚೌಕ್ ಬಳಿಯ ಗೊಡಗಾಂವ್ ಪ್ರದೇಶದಲ್ಲಿ ನೆಲೆಸಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT