ADVERTISEMENT

ಚಾನೆಲ್‌ ಸಂಪಾದಕನ ಬಂಧನ

ಲೈಂಗಿಕ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಚೆನ್ನೈ (ಪಿಟಿಐ): ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರು­ಕುಳ ಆರೋಪ ಮಾಡಿದ್ದರಿಂದ ಖಾಸಗಿ ಟಿ.ವಿ.ಚಾನೆಲ್‌ ಸಂಪಾದಕ­ರನ್ನು ಪೊಲೀ­ಸರು ಭಾನುವಾರ ಬಂಧಿಸಿದ್ದಾರೆ. ‘ಮಾಜಿ ಉದ್ಯೋಗಿ ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ಸಂಪಾದಕ­ರನ್ನು ಬಂಧಿಸಲಾಗಿದೆ’ ಎಂದು ಚಾನೆಲ್‌ ಹೇಳಿದೆ.

ಸಂಸ್ಥೆಯ ಸೇವೆಯಿಂದ ಬಿಡುಗಡೆ ಮಾಡಿದ ನಂತರ ಮಾಜಿ ಉದ್ಯೋಗಿ ದೂರು ನೀಡಿದ್ದಾರೆ. ಪೊಲೀಸರು ಸತ್ಯಾ­ಸತ್ಯತೆ ಪರಿಶೀಲಿಸದೆ ಸಂಪಾದಕರನ್ನು ಬಂಧಿಸಿದ್ದಾರೆ ಎಂದು ಚಾನೆಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.