ADVERTISEMENT

ಚೀನಾ ಸೇರಿದಂತೆ ಎರಡೂ ಕಡೆಯ ಯುದ್ಧ ಎದುರಿಸುವ ಸಾಮರ್ಥ್ಯ ವಾಯುಪಡೆಗಿದೆ: ಬಿ.ಎಸ್. ಧನೋವಾ

ಏಜೆನ್ಸೀಸ್
Published 5 ಅಕ್ಟೋಬರ್ 2017, 9:04 IST
Last Updated 5 ಅಕ್ಟೋಬರ್ 2017, 9:04 IST
ಬಿ.ಎಸ್. ಧನೋವಾ
ಬಿ.ಎಸ್. ಧನೋವಾ   

ನವದೆಹಲಿ: ‘ಚೀನಾ ಸೇರಿದಂತೆ ಎರಡೂ ಕಡೆಯ ಯುದ್ಧವನ್ನು ಎದುರಿಸುವ ಸಾಮರ್ಥ್ಯ ಭಾರತೀಯ ವಾಯುಸೇನೆಗಿದೆ’ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ.

ವಾಯುಪಡೆ ದಿನಾಚರಣೆಯ ಮುನ್ನಾದಿನವಾದ ಗುರುವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ರೀತಿಯ ಯುದ್ಧಕ್ಕೆ ವಾಯುಸೇನೆ ಸಿದ್ಧವಿದೆ. ಗಡಿಯಲ್ಲಿ ಶತ್ರುಗಳನ್ನು ಗುರುತಿಸುವ ಹಾಗೂ ಅವರನ್ನು ನಿರ್ನಾಮ ಮಾಡುವ ಶಕ್ತಿ ವಾಯುಪಡೆಗಿದೆ’ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

‘ಭಾರತದೊಂದಿಗೆ ಚೀನಾ ಯುದ್ಧಕ್ಕೆ ಮುಂದಾದರೆ ಪಾಕಿಸ್ತಾನ ತನ್ನ ಬಹು ವರ್ಷಗಳ ಮಿತ್ರ ರಾಷ್ಟ್ರವಾದ ಚೀನಾ ಬೆಂಬಲಕ್ಕೆ ನಿಲ್ಲಬಹುದು. ಆಗ ಭಾರತವು ಏಕಕಾಲಕ್ಕೆ ಎರಡು ರಾಷ್ಟ್ರಗಳನ್ನು ಎದುರಿಸಬೇಕಾಗುತ್ತದೆ’ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಕಳೆದ ತಿಂಗಳು ಎಚ್ಚರಿಕೆ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.