ADVERTISEMENT

ಚುನಾವಣೆ: ಕಟ್ಟುನಿಟ್ಟಿನ ಕ್ರಮ ಜಾರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST
ಚುನಾವಣೆ: ಕಟ್ಟುನಿಟ್ಟಿನ ಕ್ರಮ ಜಾರಿ
ಚುನಾವಣೆ: ಕಟ್ಟುನಿಟ್ಟಿನ ಕ್ರಮ ಜಾರಿ   

ನವದೆಹಲಿ (ಪಿಟಿಐ): ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಮೇಲೆ ಆಯೋಗ ನಿಗಾ ಇಡಲಿದೆ. 

ಹಣ ಕೊಟ್ಟು ಪ್ರಸಾರ ಮಾಡುವ ಸುದ್ದಿಗಳ (ಕಾಸಿಗಾಗಿ ಸುದ್ದಿ) ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದೆ.

ಸ್ಪರ್ಧೆಗೆ ಮುನ್ನ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದು ಅಲ್ಲಿಂದಲೇ ಚುನಾವಣೆಯ ಖರ್ಚುಗಳನ್ನು ನಿರ್ವಹಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.  ನಾಮಪತ್ರ ಸಲ್ಲಿಕೆಯ ವಿಧಾನ ಸರಳೀಕರಣಗೊಳಿಸಲಾಗಿದೆ. ಚುನಾವಣೆಯ ವೇಳೆ ಬಿಗಿ ಭದ್ರತೆ  ಒದಗಿಸಲಾಗುವುದಲ್ಲದೆ ವಿವಿಧ ರಾಜ್ಯಗಳ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಜಾರಿಯಲ್ಲಿರುತ್ತದೆ ಎಂದ ಅವರು, ಚುನಾವಣಾ ಸಂಬಂಧಿ ದೂರುಗಳಿಗಾಗಿ ಕಾಲ್ ಸೆಂಟರ್ ತೆರೆಯಲಾಗುವುದು. ಜತೆಗೆ ಚರ್ಚುಗಳು, ಮಸೀದಿಗಳು ಸೇರಿದಂತೆ ಯಾವುದೇ ಪ್ರಾರ್ಥನಾ ಮಂದಿರವನ್ನು ಮತಯಾಚನೆಯ ವೇದಿಕೆಯನ್ನಾಗಿ ಬಳಸದಂತೆಯೂ ಎಚ್ಚರಿಕೆ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.

ಪ್ರಚಾರ ಆರಂಭ: ರಾಜಕೀಯವಾಗಿ ಅತಿಸೂಕ್ಷ್ಮ ಪ್ರದೇಶವಾಗಿರುವ ಎರಡೂ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ಪ್ರಚಾರ ಕಾರ್ಯಗಳನ್ನು ಆರಂಭಿಸಿವೆ.

ಒಬ್ಬನಿಗಾಗಿ ಮತಗಟ್ಟೆ
ಒಬ್ಬ ಮತದಾರನಿಗಾಗಿ ಮತಗಟ್ಟೆ  ಬೇಕೇ? ಹೌದು ಎನ್ನುತ್ತಾರೆ ಮುಖ್ಯ ಚುನಾವಣಾ ಆಯಕ್ತರು. ಗುಜರಾತ್‌ನ ಗಿರ್ ಅರಣ್ಯ ವಲಯದಲ್ಲಿ ಕೇವಲ ಒಬ್ಬ  ಮತದಾರನಿದ್ದು ಗುರು ಭರತ್ ದಾಸ್ ಎಂಬ ಈ ವ್ಯಕ್ತಿಗಾಗಿ ಮತಗಟ್ಟೆ ತೆರೆಯಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ. ಎಸ್. ಸಂಪತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.