ADVERTISEMENT

ಚೇತನ್ ಭಗತ್‌ ಹೊಸ ಕೃತಿ ‘ಒನ್ ಇಂಡಿಯನ್ ಗರ್ಲ್‌’

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2016, 19:30 IST
Last Updated 19 ಆಗಸ್ಟ್ 2016, 19:30 IST
ಲೇಖಕ ಚೇತನ್ ಭಗತ್‌
ಲೇಖಕ ಚೇತನ್ ಭಗತ್‌   

ನವದೆಹಲಿ (ಪಿಟಿಐ): ಖ್ಯಾತ ಇಂಗ್ಲಿಷ್‌ ಲೇಖಕ ಚೇತನ್ ಭಗತ್‌ ತಮ್ಮ ಹೊಸ ಪುಸ್ತಕದ ಶೀರ್ಷಿಕೆಯನ್ನು ಶುಕ್ರವಾರ ಬಹಿರಂಗಪಡಿಸಿದ್ದಾರೆ.

‘ಒನ್‌ ಇಂಡಿಯನ್ ಗರ್ಲ್‌’  ಚೇತನ್ ಭಗತ್ ಅವರ ಹೊಸ ಪುಸ್ತಕದ ಹೆಸರು. ಟ್ವಿಟರ್‌ನಲ್ಲಿ ಶೀರ್ಷಿಕೆಯ ಪ್ರಕಟಣೆ ಜತೆಗೆ ಪುಸ್ತಕದ ಕುರಿತ ಟೀಸರ್‌ನ ವಿಡಿಯೊ ಕೊಂಡಿಯನ್ನು ಅವರು ಲಗತ್ತಿಸಿದ್ದಾರೆ.

ತಮ್ಮ ಹಿಂದಿನ ಪುಸ್ತಕಗಳಿಗಿಂತ ವಿಭಿನ್ನವಾಗಿ, ಮಹಿಳೆಯೊಬ್ಬರ ದೃಷ್ಟಿಕೋನದಿಂದ ಈ ಕೃತಿ ಬರೆಯಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹದಿನೈದು ದಿನಗಳಲ್ಲಿ ಮದುವೆಯಾಗಲಿರುವ ರಾಧಿಕಾ ಮೆಹ್ತಾ ಎಂಬ ಯುವತಿಯು ತನ್ನ ಕಥೆಯನ್ನು ನಿರೂಪಣೆ ಮಾಡುವ ಶೈಲಿಯಲ್ಲಿ ಕೃತಿ ಇದೆ ಎಂದು ಟೀಸರ್‌ನಲ್ಲಿ ಹೇಳಲಾಗಿದೆ.

‘ಒನ್ ಇಂಡಿಯನ್‌ ಗರ್ಲ್‌’ ಅಕ್ಟೋಬರ್‌ ಒಂದರಂದು ಮಾರುಕಟ್ಟೆಗೆ ಬರಲಿದೆ. ‘ಫೈವ್ ಪಾಯಿಂಟ್‌ ಸಮ್‌ಒನ್‌’, ‘ಒನ್ ನೈಟ್‌ ಅಟ್‌ ದಿ ಕಾಲ್‌ ಸೆಂಟರ್‌’, ‘ದಿ ಥ್ರೀ ಮಿಸ್ಟೇಕ್ಸ್‌ ಆಫ್‌ ಮೈ ಲೈಫ್‌’, ‘ಟು ಸ್ಟೇಟ್ಸ್‌’, ‘ಹಾಫ್‌ ಗರ್ಲ್‌ಫ್ರೆಂಡ್’ ಚೇತನ್ ಭಗತ್ ಅವರ ಜನಪ್ರಿಯ ಕೃತಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.