ADVERTISEMENT

ಚೌತಾಲ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST
ಚೌತಾಲ ಜಾಮೀನು ಅರ್ಜಿ ವಜಾ
ಚೌತಾಲ ಜಾಮೀನು ಅರ್ಜಿ ವಜಾ   

ನವದೆಹಲಿ (ಪಿಟಿಐ): ಶಿಕ್ಷಕರ ನೇಮ­ಕಾತಿ ಹಗರಣದಲ್ಲಿ ಜೈಲುಶಿಕ್ಷೆಗೆ ಒಳಗಾ­ಗಿ­ರುವ ಹರಿಯಾಣದ ಮಾಜಿ ಮುಖ್ಯ­ಮಂತ್ರಿ ಓಂಪ್ರಕಾಶ್‌ ಚೌತಾಲ ಅವರು ತಮಗೆ ವೈದ್ಯಕೀಯ ನೆಲೆಯಲ್ಲಿ ನೀಡಿದ ಜಾಮೀನನು್ನ ವಿಸ್ತರಿಸುವಂತೆ ಕೋರಿ ಸಲಿ್ಲಿ­ಸಿದ ಅರ್ಜಿಯನ್ನು ಬುಧ­ವಾರ ಸುಪ್ರೀಂ­ಕೋರ್ಟ್  ವಜಾಗೊಳಿಸಿದೆ.

ಚೌತಾಲ ಅವರು ಜೈಲು ಅಧಿಕಾರಿ­ಗಳ ಮುಂದೆ ಈ ತಿಂಗಳ 17ರ ಬದಲಿಗೆ 23ರಂದು ತಪ್ಪದೆ ಶರಣಾಗಬೇಕು ಎಂದು  ನ್ಯಾಯಪೀಠ ಆದೇಶಿಸಿದೆ. ‘ಏಮ್ಸನ ಉನ್ನತ ಮಟ್ಟದ ವೈದ್ಯ­ಕೀಯ ಮಂಡ­ಳಿಯು ಚೌತಾಲ ಇನ್ನು ಆಸ್ಪತ್ರೆ­ಯ­ಲ್ಲಿರುವ ಅವಶ್ಯಕತೆ ಇಲ್ಲ’ ಎಂದು ತಿಳಿ­ಸಿ­ರುವುದಾಗಿ ನ್ಯಾಯ­ಮೂರ್ತಿ­­ಗಳಾದ ಎಚ್‌.ಎಲ್‌. ದತ್ತು ಮತ್ತು ಎಸ್‌.ಜೆ. ಮುಖೋಪಾಧ್ಯಾಯ ಅವರ­ನ್ನೊಳಗೊಂಡ ಪೀಠ ಹೇಳಿತು. ‘ಚೌತಾಲ ಇರಬೇಕಾದ ಸ್ಥಳ ಜೈಲೇ ಹೊರತು ಆಸ್ಪತ್ರೆಯಲ್ಲ’ ಎಂದೂ ಪೀಠ ಖಾರವಾಗಿ ನುಡಿದಿದೆ.

ಶಿಕ್ಷೆಗೆ ಗುರಿಯಾದ ಗಣ್ಯರ ಆಸ್ಪತ್ರೆ­ ವಾಸಕ್ಕೆ ಕಡಿವಾಣ: ‘ಸುಪ್ರೀಂ’ ಇಂಗಿತ
ಶಿಕ್ಷೆಗೆ ಗುರಿಯಾದ ಗಣ್ಯರು ಅನಾರೋಗ್ಯ ನೆಪದಿಂದ ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಕಳೆಯುವ ಪ್ರವೃತ್ತಿಯು ಇತ್ತಿಚೀನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ‘ದೇಶದ ದುರಂತ’ ಎಂದಿರುವ ಸುಪ್ರೀಂ ಕೋರ್ಟ್‌, ಇಂತಹದಕ್ಕೆ ಕಡಿವಾಣ ಹಾಕುವ ಇಂಗಿತವನ್ನು ಬುಧವಾರ ವ್ಯಕ್ತಪಡಿಸಿದೆ.

ಭ್ರಷ್ಟಾಚಾರದ ಅಪರಾಧಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್‌ ಚೌತಾಲ ಅವರು ಅನಾರೋಗ್ಯದ ಕಾರಣ ನೀಡಿ ಶರಣಾಗಲು ನೀಡಿದ್ದ ಸಮಯಾವಕಾಶವನ್ನು ವಿಸ್ತರಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT