ADVERTISEMENT

ಜಗನ್‌ಗೆ ಐಟಿ ನೋಟಿಸ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ಹೈದರಾಬಾದ್ (ಪಿಟಿಐ): ಆಂಧ್ರಪ್ರದೇಶದ ಮಾಜಿ ಕಾಂಗ್ರೆಸ್ ಸಂಸದ ಜಗನ್ ಮೋಹನ ರೆಡ್ಡಿಗೆ  ಆದಾಯ ತೆರಿಗೆ ಇಲಾಖೆ ಮಂಗಳವಾರ ಕಾರಣ ಕೇಳಿ ನೋಟಿಸ್ ನೀಡಿದೆ. ಜಗನ್ ಮಾಲೀಕತ್ವದ ‘ಜಗತಿ ಪ್ರಕಾಶನ’ (ಜೆಪಿಪಿಎಲ್) ಸಂಸ್ಥೆಯು ಸಲ್ಲಿಸಿದ ಆದಾಯ ದಾಖಲೆ ಪತ್ರಗಳಲ್ಲಿ ‘122 ಕೋಟಿ ರೂಪಾಯಿಗಳಷ್ಟು ಮೊತ್ತ ತಾಳೆಯಾಗುತ್ತಿಲ್ಲ’ ಎಂಬುದು ನೋಟಿಸ್ ನೀಡಲು ಕಾರಣವಾಗಿದೆ.

ಜಗನ್ ಮಾಲೀಕತ್ವದ ಜೆಪಿಪಿಎಲ್ ಸಂಸ್ಥೆಯು ತೆಲುಗು ‘ಸಾಕ್ಷಿ’ ಪತ್ರಿಕೆ ಮತ್ತು ಟಿವಿ ಚಾನೆಲ್ ನಡೆಸುತ್ತಿದೆ. ಪ್ರಸಕ್ತ ವರ್ಷದಲ್ಲಿ 500 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿರುವ ಜಗನ್ ಸೆಪ್ಟೆಂಬರ್‌ನಲ್ಲಿ  84 ಕೋಟಿ ಮೊತ್ತದ ಮುಂಗಡ ತೆರಿಗೆ ಪಾವತಿಸಿದ್ದರು. ಆದರೆ ಈ ದಾಖಲೆ ಪತ್ರಗಳು ಸರಿಹೊಂದುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್‌ಆರ್ ಪುತ್ರ ಜಗನ್‌ಮೋಹನ್ ರೆಡ್ಡಿ ಕಳೆದ ವರ್ಷ ಕಾಂಗ್ರೆಸ್‌ನಿಂದ ಹೊರ ಬಂದು ‘ವೈಎಸ್‌ಆರ್ ಕಾಂಗ್ರೆಸ್’ ಹೆಸರಿನ ಹೊಸ ಪಕ್ಷ ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.