ADVERTISEMENT

ಜನಪ್ರಿಯತೆ ಗೀಳು ಬೇಡ- ನ್ಯಾ.ಕಪಾಡಿಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಮುಂಬೈ (ಪಿಟಿಐ): ರಾಜಕೀಯ ಮತ್ತು ಜನಪ್ರಿಯತೆಯ ಗೀಳಿನಿಂದ ನ್ಯಾಯಾಂಗ ಸ್ವತಂತ್ರವಾಗಿ ಇರಬೇಕು. ನ್ಯಾಯಮೂರ್ತಿಗಳು ಬಹುಮತದ ಅಭಿಪ್ರಾಯಕ್ಕೆ ಮಣಿಯದೆ ಕಾನೂನಿನ ಪ್ರಕಾರ ನ್ಯಾಯದಾನ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಪ್ರತಿಪಾದಿಸಿದರು.

ನಾನಿ ಪಾಲ್ಕಿವಾಲಾ ಸ್ಮಾರಕ ಟ್ರ ಸ್ಟ್‌ನ 9ನೇ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳು ಜನಪ್ರಿಯತೆಯ ಹಪಾಹಪಿಯಿಂದ ದೂರ ಉಳಿಯದಿದ್ದರೆ ಅವರು ಹೊರಡಿಸುವ ಆದೇಶಗಳು ಟೀಕೆಗೆ ಒಳಗಾಗುವ ಸಂದರ್ಭಗಳು ಎದುರಾಗುತ್ತವೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.