ADVERTISEMENT

ಜಯಾ ಬಚ್ಚನ್ ರೂ 92 ಕೋಟಿ ಒಡತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಲಖನೌ(ಪಿಟಿಐ): ಸಿನಿಮಾ ತಾರೆಯಾಗಿ ನಂತರ ರಾಜಕೀಯ ಪ್ರವೇಶಿಸಿದ ಜಯಾ ಬಚ್ಚನ್ ಅವರ ಆಸ್ತಿ ಮೌಲ್ಯ 91.65 ಕೋಟಿ ರೂಪಾಯಿ.

ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಯಾ ತಮ್ಮ ಆಸ್ತಿಪಾಸ್ತಿ ವಿವರ ನೀಡಿದ್ದು, ಪತಿ ಮೆಗಾಸ್ಟಾರ್ ಅಮಿತಾಬ್ ಬಳಿ ಇರುವ ಆಸ್ತಿ 402.21 ಕೋಟಿ ಎಂದು ದಾಖಲಿಸಿದ್ದಾರೆ.

ರೂ 94,246 ರೂ ನಗದು ತಮ್ಮ ಬಳಿ ಇದ್ದು, 3.97 ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದಾಗಿ ಜಯಾ ತಿಳಿಸಿದ್ದಾರೆ. ರೂ 30 ಲಕ್ಷ ಮೌಲ್ಯದ ಟೊಯೊಟಾ ಲೆಕ್ಸಸ್ ಸೇರಿ ಎರಡು ವಾಹನಗಳು ಇದ್ದು ರೂ 13.34 ಕೋಟಿ ಮೌಲ್ಯದ ಚಿನ್ನಾಭರಣ, ಮುಂಬೈನಲ್ಲಿ ಎರಡು ಬೃಹತ್ ಬಂಗಲೆ ಹಾಗೂ ಭೋಪಾಲ್‌ನಲ್ಲಿ ಎರಡು ಫ್ಲ್ಯಾಟ್, ಭೋಪಾಲ್ ಹಾಗೂ ಲಖನೌನಲ್ಲಿ ಕೃಷಿ ಭೂಮಿ ಅವರ ಹೆಸರಿನಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.