ADVERTISEMENT

ಜಹಾನಾ ಬಾನೋ ಕರೆಯೋಲೆಯಲ್ಲಿ ಸೀತಾ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:54 IST
Last Updated 3 ಮೇ 2018, 19:54 IST
ಜಹಾನಾ ಬಾನೋ ಕರೆಯೋಲೆಯಲ್ಲಿ ಸೀತಾ ಕಲ್ಯಾಣ
ಜಹಾನಾ ಬಾನೋ ಕರೆಯೋಲೆಯಲ್ಲಿ ಸೀತಾ ಕಲ್ಯಾಣ   

ಲಖನೌ: ಉತ್ತರ ಪ್ರದೇಶದಲ್ಲಿ ಮುಸ್ಲಿಂ ಕುಟುಂಬವೊಂದು ಆಮಂತ್ರಣ ಪತ್ರಿಕೆಯಲ್ಲಿ ಹೊಸತನ ಮೆರೆದು ಎಲ್ಲರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಸುಲ್ತಾನ್‌ಪುರ ಜಿಲ್ಲೆ ಬಾಗ್‌ಸರಾಯ್ ಗ್ರಾಮದ ಸಲೀಂ ಅವರ ಮಗಳು ಜಹಾನಾ ಬಾನೋ ಅವರ ಮದುವೆ ಯೂಸುಫ್‌ ಮೊಹಮದ್ ಅವರೊಂದಿಗೆ ನಡೆಯಿತು. ಕೇವಲ ಇಷ್ಟೇ ಆಗಿದ್ದರೆ ಇದು ದೇಶದ ಗಮನ ಸೆಳೆಯುವ ಸುದ್ದಿ ಆಗುತ್ತಿರಲಿಲ್ಲ. ಮಗಳ ಮದುವೆಯ ಕರೆಯೋಲೆಯನ್ನು ಸಲೀಂ ಅವರು ಎರಡು ರೀತಿ ಹೊರಡಿಸಿದರು. ಹಿಂದೂ ಗೆಳೆಯರಿಗೆ ಕೊಟ್ಟ ಕರೆಯೋಲೆಗಳಲ್ಲಿ ಸೀತಾ ಕಲ್ಯಾಣದ ದೃಶ್ಯವಿತ್ತು.

‘ಗೆಳೆಯ ಸಲೀಂ ಅವರದು ಸಣ್ಣ ಪ್ರಯತ್ನವೇ ಇರಬಹುದು. ಆದರೆ ಕೋಮುಸೌಹಾರ್ದ ಬೆಸೆಯುವ ದೃಷ್ಟಿಯಿಂದ ಅವರ ಚಿಂತನೆ ತುಂಬಾ ದೊಡ್ಡದು’ ಎಂದು ಮದುವೆಗೆ ಹೋಗಿ ಯುವಜೋಡಿಯನ್ನು ಹರಸಿ ಬಂದ ಶ್ಯಾಮ್ ಚರಣ್ ತಿವಾರಿ ಪ್ರತಿಕ್ರಿಯಿಸಿದರು.

ADVERTISEMENT

‘ಸಲೀಂ ಅವರು ತಮ್ಮ ಮಗಳ ಮದುವೆಗಾಗಿ ಒಟ್ಟು 750 ಕರೆಯೋಲೆಗಳನ್ನು ಮುದ್ರಿಸಿದ್ದರು. ಅದರಲ್ಲಿ 400 ಆಮಂತ್ರಣ ಪತ್ರಿಕೆಗಳು ಇಸ್ಲಾಂ ಸಂಪ್ರದಾಯದಂತೆ ಇದ್ದವು. ಹಿಂದೂಗಳಿಗೆ ನೀಡಲೆಂದು ಮುದ್ರಿಸಿದ್ದ 350 ಕರೆಯೋಲೆಗಳು ಸೀತಾ–ರಾಮರ ಚಿತ್ರಪಟ ಹೊಂದಿದ್ದವು’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.