ADVERTISEMENT

ಜಾಮೀನಿಗಾಗಿ ಲಂಚ ಪ್ರಕರಣ: ಸೋಮಶೇಖರ ರೆಡ್ಡಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಹೈದರಾಬಾದ್: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಸೋಮಶೇಖರ ರೆಡ್ಡಿ ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್ ಸೋಮವಾರ ಜಾಮೀನು ನೀಡಿದೆ. ಸದ್ಯದಲ್ಲೇ ಅವರು ಬಿಡುಗಡೆ ಹೊಂದಲಿದ್ದಾರೆ.

ಒಂದು ಲಕ್ಷ ರೂಪಾಯಿಯ ಎರಡು ಬಾಂಡ್‌ಗಳನ್ನು ಸಲ್ಲಿಸುವಂತೆ ಮತ್ತು  ಪಾಸ್‌ಪೋರ್ಟ್‌ನ್ನು  ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಒಪ್ಪಿಸುವಂತೆಯೂ ಹೈಕೋರ್ಟ್ ಸೋಮಶೇಖರ ರೆಡ್ಡಿಗೆ ನಿರ್ದೇಶಿಸಿದೆ.

ಆಂಧ್ರದ ಎಸಿಬಿ ದಾಖಲಿಸಿದ್ದ ಎರಡು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ  ಸೋಮಶೇಖರ್ ರೆಡ್ಡಿ ಅವರಿಗೆ ಸೆಪ್ಟೆಂಬರ್ 25ರಂದು ಜಾಮೀನು ದೊರಕಿತ್ತು. ಜಾಮೀನಿಗಾಗಿ ಲಂಚ ಪ್ರಕರಣದ ಪ್ರಮುಖ ಆರೋಪಿ ನಿವೃತ್ತ ನ್ಯಾಯಾಧೀಶ ಪಟ್ಟಾಭಿರಾಮ ರಾವ್, ಅವರ ಪುತ್ರ ರವಿ ಚಂದ್ರ, ಜನಾರ್ದನ ರೆಡ್ಡಿ ಆಪ್ತ ದಶರಥರಾಮಿ ರೆಡ್ಡಿ ಮತ್ತು  ಕಂಪ್ಲಿ ಶಾಸಕ ಸುರೇಶ್ ಬಾಬು ಅವರಿಗೆ ಈ ಮೊದಲೇ ಜಾಮೀನು ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.