ADVERTISEMENT

ಜೆಪಿಸಿ ಸಭೆಗೆ ಹಾಜರಾದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 7:00 IST
Last Updated 8 ನವೆಂಬರ್ 2012, 7:00 IST

 ನವದೆಹಲಿ( ಐಎಎನ್ಎಸ್):  2ಜಿ ಹಂಚಿಕೆ ಹಗರಣದಲ್ಲಿ  ಸಾಕ್ಷಿಗಳಾಗಿ ಪ್ರಧಾನಿ ಮತ್ತು ಹಣಕಾಸು ಸಚಿವ ಅವರನ್ನು ಪರಿಗಣಿಸಬೇಕೆಂಬ ಪಟ್ಟನ್ನು ಸಡಿಲಿಸಿ ಗುರುವಾರ ನಡೆದ ಜಂಟಿ ಸಂಸದೀಯ ಸಮಿತಿ ಸಭೆಗೆ ಭಾರತಿಯ ಜನತಾ ಪಾರ್ಟಿ ಹಾಜರಾಗಿದೆ.

ಬಿಜೆಪಿ ತಮ್ಮ ಬೇಡಿಕೆಯಂತೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನೋಳಗೊಂಡ ಸಾಕ್ಷಿಗಳ ಅಂತಿಮ ಪಟ್ಟಿ ಸಿದ್ದಗೊಳ್ಳುವವರೆಗೂ 2ಜಿ ತರಂಗಾಂತರ ಹಂಚಿಕೆಯ ಹಗರಣದ ಸಭೆಯಲ್ಲಿ ಹಾಜರಾಗುವುದಿಲ್ಲಾ ಎಂಬುದನ್ನು ಮರೆತು ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಹಾಜರಾಗಿದ್ದಾರೆ.

ನಮ್ಮ ಸದಸ್ಯರು ಜೆಪಿಸಿ ಸಭೆಯಲ್ಲಿ ಹಾಜರಾಗಿದ್ದರು ಕೂಡ  ತಮ್ಮ ಬೇಡಿಕೆಯನ್ನು ಪುನರುಚ್ಚರಿಸುತ್ತೇವೆ ಎಂದು  ಬಿಜೆಪಿ ಮೂಲಗಳು ತಿಳಿಸಿವೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.