ಮುಂಬೈ (ಪಿಟಿಐ): ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೊಕಾ)ಅಡಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಇಲ್ಲಿನ ವಿಶೇಷ ನ್ಯಾಯಾಲಯ 50 ಕೈದಿಗಳಿಗೆ ಜೈಲಿನಲ್ಲೇ ರಂಜಾನ್ ಆಚರಿಸಲು ಸೋಮವಾರ ಅನುಮತಿ ನೀಡಿದೆ.
ಇಲ್ಲಿನ ತಲೋಜಾ, ಆರ್ಥರ್ ರಸ್ತೆ ಹಾಗೂ ಕಲ್ಯಾಣ್ ಜೈಲಿನಲ್ಲಿರುವ ಈ ಕೈದಿಗಳು ಉಗ್ರಗಾಮಿ ಚಟುವಟಿಕೆಗಳು, ಬಾಂಬ್ ಸ್ಫೋಟದಂತಹ ಅಪರಾಧ ಕೃತ್ಯಗಳಲ್ಲಿ ಆರೋಪಿಯಾಗಿದ್ದಾರೆ. ಈ ಕೈದಿಗಳು ಜೈಲಿನಲ್ಲೇ `ರೋಜಾ' ಆಚರಿಸಲು ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.