ADVERTISEMENT

ಟಟ್ರಾ ವಿವಾದ: ನಿವೃತ್ತ ಸೇನಾಅಧಿಕಾರಿಗಳ ನಿವಾಸದಲ್ಲಿ ಶೋಧ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಟಟ್ರಾ ಟ್ರಕ್ ಪೂರೈಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಇಬ್ಬರು ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ವೆಕ್ಟ್ರಾ ಅಧಿಕಾರಿಯ ನಿವಾಸದಲ್ಲಿ ಶೋಧ ನಡೆಸಿತು.

ದೆಹಲಿಯ ವಸಂತ್ ಕುಂಜ್‌ನಲ್ಲಿನ ನಿವೃತ್ತ ಬ್ರಿಗೇಡಿಯರ್ ಪಿ.ಸಿ.ದಾಸ್, ನೋಯಿಡಾದಲ್ಲಿರುವ ಕರ್ನಲ್ ಅನಿಲ್ ದತ್ತ ಮತ್ತು ವೆಕ್ಟ್ರಾ ಉದ್ಯೋಗಿ ಅನಿಲ್ ಮಾನಸರಮಣಿ ಅವರ ನಿವಾಸಗಳನ್ನು ಶೋಧಿಸಿದ ಅಧಿಕಾರಿಗಳ ತಂಡ, ಪ್ರಮುಖ ದಾಖಲೆಗಳನ್ನು ವಶಪಡಿಸಿ ಕೊಂಡಿತು. ಈ ಮಧ್ಯೆ ಸಿಬಿಐ, ಬಿಇಎಂಎಲ್ ಅಧ್ಯಕ್ಷ ನಟರಾಜನ್ ಹಾಗೂ ವೆಕ್ಟ್ರಾ ಅಧ್ಯಕ್ಷ ರವೀಂದ್ರ ರಿಶಿ ಅವರನ್ನು ಬುಧವಾರವೂ ವಿಚಾರಣೆಗೆ ಒಳಪಡಿಸಿತು. ಇವರಿಬ್ಬರಿಂದ  ಪ್ರಮುಖ ದಾಖಲೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.