ADVERTISEMENT

ಟನ್‌ ಕಬ್ಬಿಗೆ ₨2200 ಸರ್ಕಾರಕ್ಕೆ ‘ಸಿಎಸಿಪಿ’ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ನವದೆಹಲಿ(ಪಿಟಿಐ): 2014–15ನೇ ಸಾಲಿನ ಪ್ರತಿ ಟನ್‌ ಕಬ್ಬಿಗೆ ₨220ಕ್ಕೆ ಏರಿಸಬೇಕೆಂದು ಕೇಂದ್ರಕ್ಕೆ ‘ಕೃಷಿ ವೆಚ್ಚ ಮತ್ತು ಧಾರಣೆ ಆಯೋಗ’(ಸಿಎಸಿಪಿ) ಸೋಮವಾರ ಸಲಹೆ ನೀಡಿದೆ.

ಕಬ್ಬು ಕೃಷಿಗೆ ಸಂಬಂಧಿಸಿದಂತೆ ಒಟ್ಟಾರೆ ವೆಚ್ಚವನ್ನೆಲ್ಲ ಲೆಕ್ಕಹಾಕಿ ಹಾಗೂ ಕಬ್ಬು ಬೆಳೆಯ ಆಂತರಿಕ ಲಭ್ಯತೆ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿನ ದರಗಳತ್ತಲೂ ಗಮನ ಹರಿಸಿ, ಜಾಗ್ರತೆಯಿಂದ ಚಿಂತನೆ ನಡೆಸಿ ಪ್ರತಿ ಕ್ವಿಂಟಲ್‌ಗೆ ₨220 (ಟನ್‌ಗೆ ₨2200) ‘ಎಫ್‌ಆರ್‌ಪಿ’ ನೀಡಬಹುದು ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡ ಲಾಗಿದೆ ಎಂದು ‘ಸಿಎಸಿಪಿ’ಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.