ADVERTISEMENT

ಟ್ರಂಪ್‌ಗೆ ಮತ್ತೊಂದು ಅಪ್ಪುಗೆ ಬೇಕು: ರಾಹುಲ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ಟ್ರಂಪ್‌ ಟ್ವೀಟ್‌ಗೆ ರಾಹುಲ್‌ ಅವರ ಮರುಟ್ವೀಟ್‌
ಟ್ರಂಪ್‌ ಟ್ವೀಟ್‌ಗೆ ರಾಹುಲ್‌ ಅವರ ಮರುಟ್ವೀಟ್‌   

ನವದೆಹಲಿ: ’ಪಾಕಿಸ್ತಾನದೊಂದಿಗೆ ಅಮೆರಿಕ ಸಂಬಂಧ ಸುಧಾರಣೆಗೆ ಕ್ರಮ ಕೈಗೊಂಡಿದ್ದೇವೆ. ಪಾಕಿಸ್ತಾನದ ನೆರವಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶನಿವಾರ ಮಾಡಿರುವ ಟ್ವೀಟ್‌ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಅಪ್ಪುಗೆ ಬೇಕು’ ಎಂದು ಕಾಣಿಸುತ್ತದೆ’ ಎಂದಿದ್ದಾರೆ.

ಈ ಕುರಿತು ಮರು ಟ್ವೀಟ್‌ ಮಾಡಿರುವ ರಾಹುಲ್‌, ‘ಮೋದಿ–ಜೀ ಬೇಗ ಧಾವಿಸಿ... ಟ್ರಂಪ್‌ ಅವರಿಗೆ ಇನ್ನೊಂದು ಅಪ್ಪುಗೆ ಬೇಕು ಎನಿಸುತ್ತಿದೆ’ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದ ಕೆನಡಾದ ಕುಟುಂಬವನ್ನು ಇತ್ತೀಚೆಗೆ ಪಾಕಿಸ್ತಾನ ಸೇನೆ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಬಿಡಿಸಿಕೊಂಡು ಬಂದಿತ್ತು. ಆಗ ಟ್ರಂಪ್‌ ಅವರು ಪಾಕಿಸ್ತಾನಕ್ಕೆ ಧನ್ಯವಾದ ಸಲ್ಲಿಸುತ್ತಾ ತಮ್ಮ ಎರಡು ದೇಶಗಳ ನಡುವಿನ ಸ್ನೇಹವೃದ್ಧಿ ಕುರಿತು ಟ್ವೀಟ್‌ ಮಾಡಿದ್ದರು.

ADVERTISEMENT

ಈ ಟ್ವೀಟ್‌ ಗಮನಿಸಿದ ರಾಹುಲ್‌ ಗಾಂಧಿ, ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟ್ರಂಪ್‌ ಅವರನ್ನು ಸ್ನೇಹದಿಂದ ಅಪ್ಪಿಕೊಂಡದ್ದನ್ನು ಸ್ಮರಿಸಿಕೊಂಡು ಮರುಟ್ವೀಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.