ADVERTISEMENT

ಡಿಎನ್‌ಎ ಬೆರಳಚ್ಚು ತಂತ್ರಜ್ಞಾನ ಸಂಶೋಧಕ ನಿಧನ

ಪಿಟಿಐ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಲಾಲ್‌ ಜಿ ಸಿಂಗ
ಲಾಲ್‌ ಜಿ ಸಿಂಗ   

ವಾರಾಣಸಿ/ಲಖನೌ: ಹಿರಿಯ ವಿಜ್ಞಾನಿ ಹಾಗೂ ಭಾರತದ ಡಿಎನ್‌ಎ ಬೆರಳಚ್ಚು ತಂತ್ರಜ್ಞಾನ ರೂಪಿಸಿದ್ದ ಲಾಲ್‌ಜಿ ಸಿಂಗ್ (70) ಅವರು ಭಾನುವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

‘ದೆಹಲಿಗೆ ತೆರಳಲು ವಿಮಾನ ಹತ್ತುವ ಸಲುವಾಗಿ ಲಾಲ್‌ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ ತಲುಪಿದಾಗ ಅವರು ಎದೆನೋಯುತ್ತಿರುವುದಾಗಿ ಹೇಳಿದರು. ತಕ್ಷಣವೇ ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ತುರ್ತುಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಬಿಎಚ್‌ಯುದಲ್ಲಿರುವ ಸುಂದರ್‌ಲಾಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಒ.ಪಿ. ಉಪಾಧ್ಯಾಯ ತಿಳಿಸಿದ್ದಾರೆ.

ಜೀವಕೋಶ ಮತ್ತು ಅಣು ಜೀವವಿಜ್ಞಾನ ಕೇಂದ್ರದ (ಸಿಸಿಎಂಬಿ) ಸ್ಥಾಪಕರಾಗಿದ್ದ ಸಿಂಗ್ ಅವರು ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ADVERTISEMENT

1995–1999ರ ಅವಧಿಗೆ ಸಿಂಗ್ ಅವರು ಹೈದರಾಬಾದ್‌ನಲ್ಲಿ ಡಿಎನ್‌ಎ ಬೆರಳಚ್ಚು ಹಾಗೂ ಡಯಾಗ್ನೊಸ್ಟಿಕ್ಸ್ ಕೇಂದ್ರದ (ಸಿಡಿಎಫ್‌ಡಿ) ವಿಶೇಷ ಅಧಿಕಾರಿ ಆಗಿದ್ದರು. ಬಿಎಚ್‌ಯುದಲ್ಲಿ ಬಿಎಸ್ಸಿ, ಎಂಎಸ್ಸಿ ಹಾಗೂ ಪಿಎಚ್.ಡಿ ಗಳಿಸಿದ್ದ ಅವರು ಅಲ್ಲಿಯೇ ವೃತ್ತಿ ಆರಂಭಿಸಿ 25ನೇ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಸಿಂಗ್ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.