ADVERTISEMENT

ತಮಿಳುನಾಡು ಪಠ್ಯಪುಸ್ತಕ ವಿವಾದ: ತಜ್ಞರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ನವದೆಹಲಿ (ಪಿಟಿಐ): ತಮಿಳುನಾಡಿನಲ್ಲಿ ಪಠ್ಯಪುಸ್ತಕಗಳ ವಿವಾದದ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ತಜ್ಞರ ಸಮಿತಿಗೆ ಸೂಚಿಸಿದೆ.ತಮಿಳುನಾಡಿನಲ್ಲಿ 2 ಕೋಟಿ ಮಕ್ಕಳು ಅಭ್ಯಸಿಸುವ ಪಠ್ಯಕ್ರಮ/ಪಠ್ಯಪುಸ್ತಕಗಳಲ್ಲಿ ಡಿಎಂಕೆಯನ್ನು ವಿಶೇಷವಾಗಿ ಸಂಸದೆ ಕನಿಮೋಳಿಯನ್ನು ಗುಣಗಾನ ಮಾಡಿದ್ದು ಈ ಪಠ್ಯಕ್ರಮ ಬದಲಾಯಿಸಲು ಅನುಮತಿ ನೀಡುವಂತೆ ತಮಿಳುನಾಡು ಸರ್ಕಾರ ಕೋರಿದೆ.

ಶಾಲಾ ಶಿಕ್ಷಣ ಕಾಯಿದೆಯ ತಮಿಳುನಾಡು ಸಮವಸ್ತ್ರ ವ್ಯವಸ್ಥೆ ಜಾರಿಯನ್ನು ಮುಂದುವರಿಸುವಂತೆ ಸೂಚಿಸಿದ್ದ ಮದ್ರಾಸ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ  ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.