ADVERTISEMENT

ತಮಿಳುನಾಡು: ಸೌರಶಕ್ತಿ ನೀತಿ ಜಾರಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಚೆನ್ನೈ (ಪಿಟಿಐ): ಸೌರಶಕ್ತಿ ಬಳಸಿಕೊಂಡು ಮುಂದಿನ ಮೂರು ವರ್ಷದಲ್ಲಿ 3000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ನೂತನ `ಸೌರಶಕ್ತಿ ನೀತಿ~ಯನ್ನು ತಮಿಳುನಾಡು ಸರ್ಕಾರ ಶನಿವಾರ ರೂಪಿಸಿದೆ.

ರಾಜ್ಯದಲ್ಲಿ ವರ್ಷದ 300 ದಿನ  ಬೇಸಿಗೆ ಇರುತ್ತದೆ. ಹಾಗಾಗಿ ಈ ಅವಧಿಯ ಬಿಸಿಲನ್ನೇ ಬಂಡವಾಳನ್ನಾಗಿಸಿಕೊಂಡು ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಸರ್ಕಾರ, `ತಮಿಳುನಾಡು ಸೌರಶಕ್ತಿ ನೀತಿ- 2012~ ಎಂಬ ಹೊಸ ನೀತಿ ಜಾರಿಗೆ ತರುತ್ತಿದೆ.

ಹೊಸ ನೀತಿಯನ್ವಯ, ಅಲ್ಪ ಪ್ರಮಾಣದ ವಿದ್ಯುತ್ ಬಳಸುವ ಗೃಹ ಬಳಕೆ ಮಗ್ಗ, ಕೃಷಿ, ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿ, ವಿಶೇಷ ಆರ್ಥಿಕ ವಲಯ, ಮಾಹಿತಿ ತಂತ್ರಜ್ಞಾನ ಪಾರ್ಕ್ ಸೇರಿದಂತೆ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರು ಶೇ 6ರಷ್ಟು ಸೌರ ವಿದ್ಯುತ್‌ನ್ನು ಕಡ್ಡಾಯವಾಗಿ ಖರೀದಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.