ADVERTISEMENT

ತಾಜ್‌ಮಹಲ್‌ ಸಾಂಸ್ಕೃತಿಕ ಪರಂಪರೆ ಕೇಂದ್ರ ಅಲ್ಲ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ತಾಜ್‌ಮಹಲ್‌ ಸಾಂಸ್ಕೃತಿಕ ಪರಂಪರೆ ಕೇಂದ್ರ ಅಲ್ಲ
ತಾಜ್‌ಮಹಲ್‌ ಸಾಂಸ್ಕೃತಿಕ ಪರಂಪರೆ ಕೇಂದ್ರ ಅಲ್ಲ   

ಲಖನೌ: ದೇಶ ಮತ್ತು ವಿದೇಶಗಳ ಜನರಿಗೆ ಆಗ್ರಾದ ತಾಜ್‌ಮಹಲ್‌ ದೊಡ್ಡ ಆಕರ್ಷಣೆ. ಆದರೆ ಅದು ಇರುವ ಉತ್ತರಪ್ರದೇಶದ ಸರ್ಕಾರ ಮಾತ್ರ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಿಂದ ತಾಜ್‌ಮಹಲ್‌ ಅನ್ನು ಕೈಬಿಟ್ಟಿದೆ.

ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ರಾಜ್ಯದ ಬಜೆಟ್‌ನಲ್ಲಿ ಸೇರಿಸಲಾಗಿದೆ. ಅದಕ್ಕಾಗಿ ₹2,800 ಕೋಟಿ ನಿಗದಿ ಮಾಡಲಾಗಿದೆ.

ಸಾಂಸ್ಕೃತಿಕ ಕೇಂದ್ರಗಳ ಪಟ್ಟಿಯಲ್ಲಿ ಅಯೋಧ್ಯೆ, ವಾರಾಣಸಿ, ಮಥುರಾ, ನೈಮಿಷಾರಣ್ಯ, ಚಿತ್ರಕೂಟ ಮತ್ತು ವಿಂಧ್ಯಾಚಲ ಸೇರಿವೆ. ತಾಜ್‌ಮಹಲ್‌ ಇಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.