ADVERTISEMENT

ತಿರುಪತಿ ಹುಂಡಿಯಲ್ಲಿ ಚಿನ್ನದ ವಿಗ್ರಹಗಳು...

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ತಿರುಪತಿ: ಇಲ್ಲಿನ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಾಲಯದ ಹುಂಡಿಗೆ ಅನಾಮಧೇಯ ಭಕ್ತರೊಬ್ಬರು 1.25 ಕೋಟಿ ಮೌಲ್ಯದ ರತ್ನಖಚಿತವಾದ ವೆಂಕಟೇಶ್ವರ, ಲಕ್ಷ್ಮಿ, ಪದ್ಮಾವತಿಯ ಚಿನ್ನದ ವಿಗ್ರಹಗಳನ್ನು ಸಮರ್ಪಿಸಿದ್ದಾರೆ.

ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಎಲ್.ವಿ.ಸುಬ್ರಹ್ಮಣ್ಯಂ ಮತ್ತು ಜಂಟಿ  ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಈ ವಿಗ್ರಹಗಳನ್ನು ಸೆ.28ರಂದು ಅರ್ಪಿಸಲಾಗಿದೆ.
 
ಇವು 1014 ವಜ್ರಗಳು, 552 ಮಾಣಿಕ್ಯ, 197 ಪಚ್ಚೆಗಳನ್ನು ಒಳಗೊಂಡಿದೆ. ವೆಂಕಟೇಶ್ವರ ವಿಗ್ರಹದಲ್ಲಿ ಒಂದು ದೊಡ್ಡ ಇಂದ್ರನೀಲ ಮಣಿಯೂ ಇದೆ.ವೆಂಕಟೇಶ್ವರ ವಿಗ್ರಹವು 14 ಇಂಚು ಎತ್ತರ, 2.57 ಕೆ.ಜಿ ತೂಕವಿದ್ದು, 1.2 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. 

 ಲಕ್ಷ್ಮಿ ವಿಗ್ರಹವು 101 ಗ್ರಾಂ ತೂಕವಿದ್ದು 2,92,800 ರೂಪಾಯಿ ಮೌಲ್ಯದ್ದಾದರೆ, ಪದ್ಮಾವತಿಯ ವಿಗ್ರಹವು  81 ಗ್ರಾಂ ತೂಕವಿದ್ದು, 2,34,800 ರೂಪಾಯಿ ಬೆಲೆಯದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.