ADVERTISEMENT

ತುಟ್ಟಿಭತ್ಯೆ ಶೇ 6ರಷ್ಟು ಹೆಚ್ಚಳ: ಇಂದು ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಅಂಕೆಗೆ ಸಿಗದ ಹಣದುಬ್ಬರದಿಂದಾಗಿ ಅಗತ್ಯ ವಸ್ತುಗಳ ಬೆಲೆ ತೀವ್ರ ತುಟ್ಟಿಯಾಗಿರುವುದರಿಂದ ಕೇಂದ್ರ ಸರ್ಕಾರ ಮಂಗಳವಾರ ತುಟ್ಟಿಭತ್ಯೆಯನ್ನು (ಡಿಎ) ಶೇ 6ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

ಇದರಿಂದ 50 ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳು ಹಾಗೂ 38 ಲಕ್ಷ ಪಿಂಚಣಿದಾರರಿಗೆ ಸ್ವಲ್ಪಮಟ್ಟಿಗೆ ಪರಿಹಾರ ಲಭ್ಯವಾಗಲಿದೆ.

ಪ್ರಸ್ತುತ ತುಟ್ಟಿಭತ್ಯೆ ಮೂಲವೇತನದ ಶೇ 45ರಷ್ಟು ಇದ್ದು, ಮಂಗಳವಾರ ಇದು ಶೇ 51ಕ್ಕೆ ಏರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗ ಸೂಚಿಸಿರುವ ಸೂತ್ರದ ಅನ್ವಯ ಈ ಹೆಚ್ಚಳ ಮಾಡಲಾಗುತ್ತದೆಂದು ಹೇಳಲಾಗಿದೆ.

ADVERTISEMENT

ಸಗಟು ದರ ಆಧರಿಸಿದ ಹಣದುಬ್ಬರ ಪ್ರಮಾಣವು ಶೇ 5-6ರ ಆಸುಪಾಸಿನಲ್ಲಿದ್ದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಫೆಬ್ರುವರಿಯಲ್ಲಿ ಇದು ಶೇ 8.31ರಷ್ಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.