ADVERTISEMENT

ತೆಲುಗು ಚಿತ್ರನಟಿ ಆರತಿ ಅಗರ್ ವಾಲ್ ನಿಧನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2015, 11:46 IST
Last Updated 6 ಜೂನ್ 2015, 11:46 IST

(ಏಜನ್ಸೀಸ್): ತೆಲುಗು ಚಿತ್ರನಟಿ ಆರತಿ ಅಗರ್ ವಾಲ್ ಅವರು ನ್ಯೂಜರ್ಸಿಯ ಅಟ್ಲಾಂಟಿಕ್ ನಗರದಲ್ಲಿ ನಿಧನರಾಗಿದ್ದಾರೆ.

ಆರತಿ ಅಗರ್ ವಾಲ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ ಎಂದು ತೆಲುಗು ಟಿ.ವಿ ವಾಹಿನಿಯೊಂದಕ್ಕೆ ಅವರ ಆಪ್ತರು ಕರೆ ಮಾಡಿ ತಿಳಿಸಿದ್ದಾರೆ.

ಅವರ ಸಾವಿನ ಕಾರಣ ದೃಢಪಟ್ಟಿಲ್ಲ.

2000ರಲ್ಲಿ ಬಾಲಿವುಡ್ ಗೆ ಪ್ರವೇಶ ಪಡೆದಿದ್ದ ಆರತಿ ಅಗರ್ ವಾಲ್ ಜನಪ್ರಿಯತೆ ಪಡೆದುಕೊಂಡಿದ್ದು 2011ರಲ್ಲಿ ತೆರೆಕಂಡ ತೆಲುಗಿನ ‘ನೂವು ನಾಕು ನಚ್ಚಾವು’ ಚಿತ್ರದ ಮೂಲಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.