ADVERTISEMENT

ತೆಲುಗು ಸಾಹಿತಿ ರಾವುರಿಗೆ ಜ್ಞಾನಪೀಠ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST
2012ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ತೆಲುಗು ಲೇಖಕ ಡಾ.ರಾವುರಿ ಭಾರದ್ವಾಜ(ಗಡ್ಡಧಾರಿ) ಅವರಿಗೆ ಮನೆಯ ಸದಸ್ಯರು ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡರು	-ಪಿಟಿಐ ಚಿತ್ರ
2012ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ತೆಲುಗು ಲೇಖಕ ಡಾ.ರಾವುರಿ ಭಾರದ್ವಾಜ(ಗಡ್ಡಧಾರಿ) ಅವರಿಗೆ ಮನೆಯ ಸದಸ್ಯರು ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡರು -ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ತೆಲುಗು ಲೇಖಕ ಡಾ.ರಾವುರಿ ಭಾರದ್ವಾಜ ಅವರು 2012ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕೇವಲ 8ನೇ ತರಗತಿವರೆಗೆ ಮಾತ್ರ ಶಾಲಾ ಶಿಕ್ಷಣ ಪಡೆದಿರುವ 86 ವರ್ಷದ ಭಾರದ್ವಾಜ ಅವರು 37 ಕಥಾ ಸಂಕಲನಗಳು, 17 ಕಾದಂಬರಿಗಳು ಮತ್ತಿತರ ಕೃತಿಗಳನ್ನು ರಚಿಸಿದ್ದಾರೆ.

ಬದುಕಿನ ವಿವಿಧ ಮಗ್ಗುಲುಗಳನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿರುವ ಭಾರದ್ವಾಜ ಅವರ ಪುಸ್ತಕಗಳು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿವೆ. ಅಲ್ಲದೇ, ಹಲವು ಸಂಶೋಧನೆಗಳಿಗೂ ಅವು ಮೂಲಾಧಾರವಾಗಿವೆ. ಹೆಸರಾಂತ ಕವಿ ಸೀತಾಕಾಂತ್ ಮಹಾಪಾತ್ರ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.