ADVERTISEMENT

ತೆಹಲ್ಕಾ: ಬಂಗಾರು ಪಾತ್ರ 27ಕ್ಕೆ ತೀರ್ಪು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಹನ್ನೊಂದು ವರ್ಷಗಳ ಹಳೆಯ ರಕ್ಷಣಾ ಇಲಾಖೆಯ ವ್ಯವಹಾರದ ರಹಸ್ಯ ಕಾರ್ಯಾಚರಣೆಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರ ಪಾತ್ರದ ಕುರಿತು ದೆಹಲಿ ನ್ಯಾಯಾಲಯ ಏಪ್ರಿಲ್ 27ರವರೆಗೆ ತನ್ನ ತೀರ್ಪು ಕಾದಿರಿಸಿದೆ.
 
ಶಸ್ತ್ರಾಸ್ತ್ರಗಳನ್ನು ಖರೀದಿಸಲು ರಕ್ಷಣಾ ಇಲಾಖೆಗೆ ಶಿಫಾರಸು ಮಾಡಲು ಬಂಗಾರು ಲಕ್ಷ್ಮಣ್ ಅವರು ನಕಲಿ ಶಸ್ತ್ರಾಸ್ತ್ರ ದಲ್ಲಾಳಿಗಳಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಈ ಪ್ರಕರಣದ ತೀರ್ಪನ್ನು ಹೆಚ್ಚುವರಿ ನ್ಯಾಯಾಧೀಶ ಕನ್ವಲ್ ಜೀತ್ ಅರೋರ ಕಾದಿರಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.