ADVERTISEMENT

ತ್ರಿವಳಿ ಕೊಲೆ ಪ್ರಕರಣ: ಮೂವರಿಗೆ ಗಲ್ಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ದಶಕಗಳ ಹಿಂದೆ ದೇಶದ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಬುಧವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ದೆಹಲಿಯ ಒಂದೇ ಕುಟುಂಬದ ಮೂವರ ಸದಸ್ಯರನ್ನು ಅಮಾನುಷವಾಗಿ ಹತ್ಯೆ ಮಾಡಿದ ಉತ್ತರ ಪ್ರದೇಶದ ಸುರೇಂದರ್, ವಿಜಯ್ ಪಾಲ್ ಮತ್ತು ವೀರೆಂದರ್ ಎಂಬ ಹಂತಕರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ಹಾಗೂ ತಲಾ 1.10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮೂರು ಲಕ್ಷ ರೂಪಾಯಿ ದಂಡದ ಹಣವನ್ನು ಸಂತ್ರಸ್ತ ಕುಟುಂಬದ ಸದಸ್ಯರಿಗೆ ಪರಿಹಾರವಾಗಿ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

2004ರ ಫೆಬ್ರುವರಿಯಲ್ಲಿ ಹಂತಕರು 54 ವರ್ಷದ ಮೃದುಲಾ ಕಿಶೋರ್, ಅವರ 28 ವರ್ಷದ ಪುತ್ರ ರಾಜೇಶ್ ಕಿಶೊರ್ ಮತ್ತು 9 ವರ್ಷದ ಮೊಮ್ಮಗ ಅಂಕಿತ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಹಂತಕ ಸುರೇಂದರ್ ಮೂಲತಃ ಮೃದಲಾ ಅವರ ಗ್ರಾಮದವನಾಗಿದ್ದು, ಅವರ ಕುಟುಂಬಕ್ಕೆ ಪರಿಚಿತನಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.