ADVERTISEMENT

‘ದನದ ಮಾಂಸ ತಿನ್ನುವಂತೆ ಬೋಲ್ಟ್‌ಗೆ ತರಬೇತುದಾರರಿಂದ ಸಲಹೆ’

ವಿವಾದ ಎಬ್ಬಿಸಿದ ಬಿಜೆಪಿ ಸಂಸದ ಉದಿತ್‌ ರಾಜ್‌ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 10:07 IST
Last Updated 29 ಆಗಸ್ಟ್ 2016, 10:07 IST
‘ದನದ ಮಾಂಸ ತಿನ್ನುವಂತೆ ಬೋಲ್ಟ್‌ಗೆ ತರಬೇತುದಾರರಿಂದ ಸಲಹೆ’
‘ದನದ ಮಾಂಸ ತಿನ್ನುವಂತೆ ಬೋಲ್ಟ್‌ಗೆ ತರಬೇತುದಾರರಿಂದ ಸಲಹೆ’   

ನವದೆಹಲಿ (ಪಿಟಿಐ): ದನದ ಮಾಂಸ ಮತ್ತು ಜಮೈಕದ ಉಸೇನ್‌ ಬೋಲ್ಟ್‌ ಕುರಿತಂತೆ ಬಿಜೆಪಿ ಸಂಸದ ಹಾಗೂ ದಲಿತ ಮುಖಂಡ ಉದಿತ್‌ ರಾಜ್‌ ಮಾಡಿರುವ ಟ್ವೀಟ್‌ ಈಗ ವಿವಾದಕ್ಕೆ ಕಾರಣವಾಗಿದೆ.

‘ಬಡತನದಲ್ಲಿದ್ದ ಉಸೇನ್‌ ಬೋಲ್ಟ್‌ ಅವರಿಗೆ ದಿನಕ್ಕೆರಡು ಬಾರಿ ದನದ ಮಾಂಸ ತಿನ್ನುವಂತೆ ತರಬೇತುದಾರರು ಸಲಹೆ ನೀಡಿದ್ದರು. ಹೀಗಾಗಿ ಅವರು ಒಲಿಂಪಿಕ್ಸ್‌ನಲ್ಲಿ 9 ಚಿನ್ನದ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು’ ಎಂದು ವಾಯವ್ಯ ದೆಹಲಿ ಲೋಕಸಭಾ ಕ್ಷೇತ್ರದ ಸಂಸದ ಉದಿತ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT