
ಪ್ರಜಾವಾಣಿ ವಾರ್ತೆನಂದಿಗ್ರಾಮ (ಪ.ಬಂಗಾಳ) (ಪಿಟಿಐ): `ರೈಲು ಪ್ರಯಾಣ ದರ ಏರಿಕೆಯಾಗಲು ಬಿಡುವುದಿಲ್ಲ. ಇಂತಹ ಯಾವುದೇ ಪ್ರಸ್ತಾವವನ್ನು ನಾವು ಒಪ್ಪುವುದೂ ಇಲ್ಲ~ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ಇಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ತಾವು ನಿರ್ವಹಿಸುತ್ತಿದ್ದ ರೈಲ್ವೆ ಖಾತೆಗೆ ತಮ್ಮದೇ ಪಕ್ಷದ ಹಿರಿಯ ಮುಖಂಡ ದಿನೇಶ್ ತ್ರಿವೇದಿ ಅವರನ್ನು ಸೂಚಿಸಿದ್ದ ಮಮತಾ, ಈಗ ತ್ರಿವೇದಿ ಅವರು ಮಂಡಿಸಿದ ಚೊಚ್ಚಲ ಬಜೆಟ್‌ನ ಪ್ರಸ್ತಾವವನ್ನು ಸಾರ್ವಜನಿಕವಾಗಿಯೇ ವಿರೋಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.