ಮುಂಬೈ: ಭೂಗತ ಪಾತಕಿ ಹಾಗೂ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ದಾವೂದ್ ಇಬ್ರಾಹಿಂ ಆಸ್ತಿಯು ₹11.58ಕೋಟಿಗೆ ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯವು ಕಳ್ಳಸಾಗಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪುಲೇಶನ್ ಕಾಯ್ದೆ ಅಡಿಯಲ್ಲಿ ಹರಾಜು ಪ್ರಕ್ರಿಯೆ ಕೈಗೊಂಡಿತ್ತು.
ದಾವೂದ್ಗೆ ಸೇರಿದ ದೆಹಲಿಯ ರೋಣಕ್ ಅಫ್ರೋಜ್ ರೆಸ್ಟೋರೆಂಟ್, ಧಮರ್ವಾಲ ಕಟ್ಟಡ, ಶಬನಾಮ್ ಗೆಸ್ಟ್ ಹೌಸ್ ಈ ಮೂರು ಆಸ್ತಿಯನ್ನು ಹರಾಜಿಗೆ ಇರಿಸಿದೆ.
ಭೇಂದಿ ಬಜಾರ್ನಲ್ಲಿನ ಯಾಕೂಬ್ ರಸ್ತೆ ಬಳಿಯಿರುವ ದಾವೂದ್ನ ಮೊದಲ ಮಡದಿಯ ಹೆಸರಿನಲ್ಲಿರುವ ಶಬನಾಮ್ ಗೆಸ್ಟ್ ಹೌಸ್ ₹3.52 ಕೋಟಿ, ಧಮರ್ವಾಲ ಕಟ್ಟಡ ₹3.53 ಕೋಟಿ, ರೋಣಕ್ ಅಫ್ರೋಜ್ ರೆಸ್ಟೋರೆಂಟ್ ₹4.53 ಕೋಟಿಗೆ ಮಾರಾಟವಾಗಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.