ADVERTISEMENT

ದುರ್ವತನೆ ತೋರುವ ಪ್ರಯಾಣಿಕರಿಗೆ ₹15 ಲಕ್ಷದ ವರೆಗೂ ದಂಡ ವಿಧಿಸಲು ಚಿಂತನೆ: ಏರ್‌ ಇಂಡಿಯಾ

ಏಜೆನ್ಸೀಸ್
Published 17 ಏಪ್ರಿಲ್ 2017, 12:11 IST
Last Updated 17 ಏಪ್ರಿಲ್ 2017, 12:11 IST
ದುರ್ವತನೆ ತೋರುವ ಪ್ರಯಾಣಿಕರಿಗೆ ₹15 ಲಕ್ಷದ ವರೆಗೂ ದಂಡ ವಿಧಿಸಲು ಚಿಂತನೆ: ಏರ್‌ ಇಂಡಿಯಾ
ದುರ್ವತನೆ ತೋರುವ ಪ್ರಯಾಣಿಕರಿಗೆ ₹15 ಲಕ್ಷದ ವರೆಗೂ ದಂಡ ವಿಧಿಸಲು ಚಿಂತನೆ: ಏರ್‌ ಇಂಡಿಯಾ   

ನವದೆಹಲಿ: ದುರ್ವತನೆ ತೋರಿ ವಿಮಾನ ವಿಳಂಬಕ್ಕೆ ಕಾರಣರಾಗುವ ಪ್ರಯಾಣಿಕರಿಗೆ ₹15 ಲಕ್ಷದ ವರೆಗೂ ದಂಡ ವಿಧಿಸುವ ಕ್ರಮಕ್ಕೆ ಏರ್‌ ಇಂಡಿಯಾ  ಮುಂದಾಗಿದೆ.

ಶಿವಸೇನೆಯ ಸಂಸದ ರವೀಂದ್ರ ಗಾಯಕ್‌ವಾಡ್‌ ದೇಶೀಯ ವಿಮಾನ ಸೇವಾ ಸಂಸ್ಥೆ ಏರ್‌ ಇಂಡಿಯಾದ ಮ್ಯಾನೇಜರ್‌ ಒಬ್ಬರ ಮೇಲೆ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಶಿಸ್ತು ಕ್ರಮ ರೂಪಿಸುತ್ತಿದೆ.

ಒಂದು ಗಂಟೆವರೆಗಿನ ವಿಮಾನ ವಿಳಂಬಕ್ಕೆ ಕಾರಣವಾಗುವ ಪ್ರಯಾಣಿಕರಿಗೆ ₹5 ಲಕ್ಷ, ಒಂದರಿಂದ ಎರಡು ಗಂಟೆ ವರೆಗಿನ ವಿಳಂಬಕ್ಕೆ ₹10  ಲಕ್ಷ ಹಾಗೂ ವಿಮಾನ ಹೊರಡುವುದು ಎರಡು ಗಂಟೆಗಿಂತ ಹೆಚ್ಚು  ವಿಳಂಬವಾದಲ್ಲಿ ₹15 ಲಕ್ಷದ ವರೆಗೂ ದಂಡ ವಿಧಿಸಬಹುದಾದ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.

ADVERTISEMENT

ಹಲ್ಲೆ ಪ್ರಕರಣದ ನಂತರ ಮಾ.23ರಿಂದ ಸಂಸದ ರವೀಂದ್ರ ಗಾಯಕ್‌ವಾಡ್‌ ಅವರ ಪ್ರಯಾಣಕ್ಕೆ ಏರ್‌ ಇಂಡಿಯಾ ಹಾಗೂ ಇತರೆ ಐದು ವಿಮಾನ ಸಂಸ್ಥೆಗಳು ನಿಷೇಧ ಹೇರಿದ್ದವು. ಸಂಸದ ರವೀಂದ್ರ ಅವರು ಕ್ಷಮೆಯಾಚಿಸಿದ ಬಳಿಕ ನಿಷೇಧ ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.