ADVERTISEMENT

ದೇಶದಲ್ಲಿ 1,800 ಎಟಿಎಂ ಬಂದ್‌

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಕಳೆದ ಎಂಟು ತಿಂಗಳಲ್ಲಿ 1,800ಕ್ಕೂ ಹೆಚ್ಚು ಎಟಿಎಂಗಳನ್ನು ಬ್ಯಾಂಕುಗಳು ಮುಚ್ಚಿವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಹಿತಿಯ ಪ್ರಕಾರ, 2018ರ ಫೆಬ್ರುವರಿ ಕೊನೆ ಹೊತ್ತಿಗೆ ದೇಶದಲ್ಲಿ ಇದ್ದ ಎಟಿಎಂಗಳ ಸಂಖ್ಯೆ 2,06,659. 2017ರ ಜೂನ್‌ ಹೊತ್ತಿಗೆ 2,08,477 ಎಟಿಎಂಗಳು ಇದ್ದವು. ಅಂದರೆ, ಕಳೆದ ಜುಲೈಯಿಂದ 1,817 ಎಟಿಎಂ ಕಮ್ಮಿಯಾಗಿವೆ.

ಎಟಿಎಂಗಳ ಸಂಖ್ಯೆ ಕಡಿಮೆಯಾಗಿದ್ದರೂ ಎಟಿಎಂ ಮೂಲಕ ನಡೆಯುವ ವಹಿವಾಟು ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚಾಗಿದೆ. ಈ ಎಂಟು ತಿಂಗಳಲ್ಲಿ, ಸರಾಸರಿ ತಿಂಗಳ ವಹಿವಾಟು ಪ್ರಮಾಣ ಶೇ 7.6ರಷ್ಟು ಏರಿಕೆಯಾಗಿದೆ.  ಎಟಿಎಂ ಸಂಖ್ಯೆ ಕಡಿಮೆ ಮಾಡುವ ಮೂಲಕ ಲಾಭ ಹೆಚ್ಚಿಸುವತ್ತ ಬ್ಯಾಂಕುಗಳು ಗಮನ ಹರಿಸಿವೆ ಎಂದು ಪರಿಣತರು ಹೇಳುತ್ತಾರೆ. 

ADVERTISEMENT

ಕರ್ನಾಟಕದಲ್ಲಿ, ಕಳೆದ ಆರು ತಿಂಗಳಲ್ಲಿ 120 ಎಟಿಎಂಗಳನ್ನು ಮುಚ್ಚಲಾಗಿದೆ. 2017ರ ಜೂನ್‌ ಹೊತ್ತಿಗೆ ರಾಜ್ಯದಲ್ಲಿ 16,907 ಎಟಿಎಂಗಳು ಇದ್ದವು. ಕಳೆದ ಡಿಸೆಂಬರ್‌ ಹೊತ್ತಿಗೆ ಅದು 16,787ಕ್ಕೆ ಇಳಿದಿದೆ. ದೇಶದಲ್ಲಿ ಅತಿ ಹೆಚ್ಚು ಎಟಿಎಂಗಳಿರುವ ನಾಲ್ಕನೇ ರಾಜ್ಯ ಕರ್ನಾಟಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.