ADVERTISEMENT

ದೋಕಲಾ ಸಮೀಪ ಚೀನಾ ಸೈನಿಕರ ಠಿಕಾಣಿ

ಪಿಟಿಐ
Published 6 ಅಕ್ಟೋಬರ್ 2017, 20:38 IST
Last Updated 6 ಅಕ್ಟೋಬರ್ 2017, 20:38 IST
ದೋಕಲಾ ಸಮೀಪ ಚೀನಾ ಸೈನಿಕರ ಠಿಕಾಣಿ
ದೋಕಲಾ ಸಮೀಪ ಚೀನಾ ಸೈನಿಕರ ಠಿಕಾಣಿ   

ನವದೆಹಲಿ: ಇತ್ತೀಚೆಗೆ ಭಾರತ ಮತ್ತು ಚೀನಾ ಯೋಧರು ಮುಖಾಮುಖಿಯಾಗಿ ಬಿಕ್ಕಟ್ಟು ಸೃಷ್ಟಿಯಾಗಿದ್ದ ದೋಕಲಾಕ್ಕಿಂತ 12 ಕಿ.ಮೀ ದೂರದ ಸ್ಥಳದಲ್ಲಿ ಚೀನಾದ ಸೈನಿಕರು ಜಮಾಯಿಸಿದ್ದಾರೆ. ಅಲ್ಲಿ ಈಗಾಗಲೇ ಇರುವ ರಸ್ತೆಯೊಂದನ್ನು ಅಗಲ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೋಕಲಾ ಪ್ರಸ್ಥಭೂಮಿಯಲ್ಲಿ ಚೀನಾ ತನ್ನ ಸೈನಿಕರ ಇರುವಿಕೆಯನ್ನು ಹೆಚ್ಚಿಸುತ್ತಲೇ ಇದೆ. ಇದು ಭಾರತ–ಚೀನಾ ನಡುವೆ ಮತ್ತೆ ಸಂಘರ್ಷಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಚುಂಬಿ ಕಣಿವೆಯಲ್ಲಿ ಚೀನಾದ ಅಧಿಕ ಸೈನಿಕರು ಠಿಕಾಣಿ ಹೂಡಿದ್ದಾರೆ ಎಂದು ಭಾರತದ ವಾಯು
ಪಡೆ ಮುಖ್ಯಸ್ಥ ಬಿ.ಎಸ್‌. ಧನೋಆ ಅವರೂ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT