ADVERTISEMENT

ನಕ್ಸಲೀಯರಿಂದ ವರ್ಷಕ್ಕ್ಙೆ 140 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ನವದೆಹಲಿ: ಮಾವೊವಾದಿಗಳು ವಿವಿಧ ಮೂಲಗಳಿಂದ ವಾರ್ಷಿಕ ಸುಮಾರು ರೂ140 ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿರುವುದಾಗಿ ನಕ್ಸಲ್ ಸಂಘಟನೆಗಳ ಆರ್ಥಿಕತೆ ಕುರಿತು ಸರ್ಕಾರ ನಡೆಸಿದ ಪ್ರಥಮ ಅಧ್ಯಯನ ವರದಿ ತಿಳಿಸಿದೆ.

ಈ ಹಣವನ್ನು ಹಂಗಾಮಿ ಕೋಠಿಯಲ್ಲಿ ಮತ್ತು ತಮ್ಮ ಬಗ್ಗೆ ಅನುಕಂಪ ಹೊಂದಿರುವವರ ಬಳಿ ಇಟ್ಟು, ಸಂಘಟನೆಯ ಕಾರ್ಯಚಟುವಟಿಕೆ ಮತ್ತು ಅಡುಗೆ-ಬೆಳಕು ಮತ್ತಿತರ ಕಾರ್ಯಗಳಿಗೆ ಬೇಕಾದ ಇಂಧನ ಸಂಗ್ರಹಕ್ಕೆ ತಗಲುವ ವೆಚ್ಚವನ್ನು ಮಾವೊವಾದಿಗಳು ನಿರಂತರವಾಗಿ ಲೆಕ್ಕಪರಿಶೋಧನೆಗೆ ಒಳಪಡಿಸುತ್ತಿರುವುದಾಗಿ ವರದಿ ಹೇಳಿದೆ.

ಒಂಬತ್ತು ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಮಾವೊವಾದಿಗಳ ಸಂಪರ್ಕ ಹೊಂದಿರುವ ಹಲವರ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಸರ್ಕಾರದ ಅನೇಕ ಅಭಿವೃದ್ಧಿ ಯೋಜನೆಗಳಿಂದ ಹಣ ಕಡಿತ, ಮರಕಳ್ಳಸಾಗಾಣಿಕೆಗೆ ನೆರವಾಗುವುದು, ಗುತ್ತಿಗೆದಾರರು, ಅರಣ್ಯ ವಸ್ತುಗಳ ವ್ಯಾಪಾರಿಗಳು, ಗಣಿ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಮತ್ತಿತರಿಂದ ಹಫ್ತಾ ವಸೂಲಿ ಇತ್ಯಾದಿ ಮೂಲಗಳಿಂದ ಮಾವೊವಾದಿಗಳು ಹಣ ಪಡೆಯುತ್ತಿದ್ದಾರೆ.

ಇದರ ಜೊತೆಗೆ ಸದಸ್ಯತ್ವ ಶುಲ್ಕ ಮತ್ತು ಅನುಕಂಪದಾರರು ಸ್ವ-ಇಚ್ಛೆಯಿಂದ ಹಣ ನೀಡುತ್ತಿದ್ದಾರೆ ಎಂದು ವರದಿ ಬಗ್ಗೆ ತಿಳಿದಿರುವ ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT