ನವದೆಹಲಿ(ಪಿಟಿಐ): ಛತ್ತೀಸಗಡದಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ನರಮೇಧ ದಿಂದ ಎಚ್ಚೆತ್ತುಕೊಂಡಿರುವ ದೂರ ಸಂಪರ್ಕ ಆಯೋಗ, ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಬಗ್ಗೆ ತೀರ್ಮಾನಿಸಲಿದೆ.
ನಕ್ಸಲ್ ದಾಳಿ ಅತಿ ಹೆಚ್ಚು ನಡೆಯುತ್ತಿ ರುವ ದೇಶದ 9 ರಾಜ್ಯಗಳಲ್ಲಿ ಮೊಬೈಲ್ ಗೋಪುರ ಗಳನ್ನು ಸ್ಥಾಪಿಸುವುದನ್ನು ಚರ್ಚಿಸಲು ದೂರಸಂಪರ್ಕ ಇಲಾಖೆ ಮುಂದಿನ ವಾರದಲ್ಲಿ ದೂರಸಂಪರ್ಕ ಆಯೋಗದ ಅಂತರ್ ಸಚಿವಾಲಯದ ಅಧಿಕಾರಿಗಳ ಸಭೆಯನ್ನು ಆಯೋಜಿಸಿದೆ.
‘ಮುಂದಿನ ವಾರದ ಸಭೆ ನಡೆಯಲಿದೆ. ಆದರೆ ಇನ್ನೂ ದಿನಾಂಕ ಅಂತಿಮ ಗೊಂಡಿಲ್ಲ’ ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಎಂ.ಎಫ್. ಫಾರೂಕಿ ಹೇಳಿದ್ದಾರೆ.
ಮೊಬೈಲ್ ಗೋಪುರಗಳನ್ನು ಜೂನ್ ತಿಂಗಳೊಳಗೆ ನಿರ್ಮಿಸಬೇಕಾಗಿದೆ. ಆದರೆ ಉಪಗ್ರಹ ವೆಚ್ಚ ಪಾವತಿ ಗೊಂದಲದಿಂದಾಗಿ ತೊಂದರೆ ಯಾಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ನೀಡಿರುವ ₨3046 ಕೋಟಿ ಅಲ್ಲದೆ ₨789 ಕೋಟಿಯನ್ನು ಹೆಚ್ಚುವರಿ ಯಾಗಿ ನೀಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.