ADVERTISEMENT

ನಟ ದಿಲೀಪ್‌ ಅರ್ಜಿ: ಕೇರಳ ಸರ್ಕಾರ, ಸಿಬಿಐಗೆ ನೋಟಿಸ್‌

ಪಿಟಿಐ
Published 14 ಜೂನ್ 2018, 19:27 IST
Last Updated 14 ಜೂನ್ 2018, 19:27 IST
ನಟ ದಿಲೀಪ್‌
ನಟ ದಿಲೀಪ್‌   

ಕೊಚ್ಚಿ: ಕಳೆದ ವರ್ಷದ ಫೆಬ್ರುವರಿಯಲ್ಲಿ ನಟಿಯೊಬ್ಬರನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮಲಯಾಳ ನಟ ದಿಲೀಪ್‌ ಅವರು ಸಲ್ಲಿಸಿದ್ದ ಅರ್ಜಿ ಸಂಬಂಧ, ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಕೇರಳ ಹೈಕೋರ್ಟ್ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ರಾಜ್ಯಪೊಲೀಸ್‌ ಇಲಾಖೆಯ ನಿಯಂತ್ರಣದಿಂದ ಹೊರತಾದ ಸ್ವತಂತ್ರ ತನಿಖಾ ಸಂಸ್ಥೆಯಿಂದ ಪ್ರಕರಣದ ತನಿಖೆ ನಡೆಸುವಂತೆ ದಿಲೀಪ್‌ ಅರ್ಜಿಯಲ್ಲಿ ಕೋರಿದ್ದಾರೆ.

ಇದನ್ನು ವಿರೋಧಿಸಿರುವ ಸರ್ಕಾರ, ವಿಚಾರಣೆ ವಿಳಂಬವಾಗುವಂತೆ ನೋಡಿಕೊಳ್ಳಲು ನಟ ಈ ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದೆ. ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ಅನ್ಯಾಯ, ಪಕ್ಷಪಾತ ಹಾಗೂ ದುರುದ್ದೇಶದಿಂದ ನಡೆಸುತ್ತಿದೆ ಎಂದು ದಿಲೀಪ್‌ ಅರ್ಜಿಯಲ್ಲಿ ದೂರಿದ್ದಾರೆ.

ADVERTISEMENT

ಕಳೆದ ಜುಲೈ 10ರಂದು ಅವರನ್ನು ಬಂಧಿಸಿ, 85 ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.