ADVERTISEMENT

ನವಾಜ್‌ ಷರೀಫ್‌ ನಿವಾಸದ ಬಳಿ ಬಾಂಬ್ ದಾಳಿಗೆ ಒಂಬತ್ತು ಬಲಿ

ಏಜೆನ್ಸೀಸ್
Published 15 ಮಾರ್ಚ್ 2018, 5:39 IST
Last Updated 15 ಮಾರ್ಚ್ 2018, 5:39 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಿವಾಸದ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಐವರು ಪೊಲೀಸರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಷರೀಫ್‌ ನಿವಾಸದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಚೆಕ್‌ಪೋಸ್ಟ್‌ ಬಳಿ ಸ್ಫೋಟ ಸಂಭವಿಸಿದೆ. ಪೊಲೀಸರು ಸೇರಿದಂತೆ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮೃತಪಟ್ಟವರಲ್ಲಿ ಇಬ್ಬರು ಇನ್ಸ್‌ಪೆಕ್ಟರ್‌ ಮತ್ತು ಪೊಲೀಸ್‌ ಪೇದೆಗಳೂ ಸೇರಿದ್ದಾರೆ. 14 ಮಂದಿ ಪೊಲೀಸರು ಸೇರಿ 25 ಜನರು ಗಾಯಗೊಂಡಿದ್ದಾರೆ. ಈ ಪೈಕಿ, ನಾಲ್ವರು ಪೊಲೀಸರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್‌ ವಕ್ತಾರ ಜಾಮ್ ಸಾಜ್ಜಾದ್ ತಿಳಿಸಿದ್ದಾರೆ.

ADVERTISEMENT

ಚೆಕ್‌ಪೋಸ್ಟ್‌ ಬಳಿ ಬಾಂಬ್‌ನೊಂದಿಗೆ ಬಂದಿದ್ದ ಬಾಲಕನೊಬ್ಬ ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ತಾಲಿಬಾನ್ ಉಗ್ರ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಪಾಕಿಸ್ತಾನ್ ಸೂಪರ್ ಕ್ರಿಕೆಟ್ ಲೀಗ್‌ ಮುಕ್ತಾಯಕ್ಕೂ ಮುನ್ನ ಆತ್ಮಾಹುತಿ ದಾಳಿ ನಡೆದಿರುವುದು ಆತಂಕ ಸೃಷ್ಟಿಸಿದೆ. ಆದರೆ ಸೆಮಿಫೈನಲ್‌ ಪಂದ್ಯಗಳು ನಿಗದಿತ ದಿನಾಂಕದಂದು ಬಿಗಿ ಭದ್ರತೆಯೊಂದಿಗೆ ನಡೆಯಲಿವೆ’ ಎಂದು ಪೊಲೀಸ್ ಅಧಿಕಾರಿ ಅಶ್ರಫ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.