ADVERTISEMENT

ನಸುಕಿನಲ್ಲಿಯೇ ಕಚೇರಿಗೆ ಹಾಜರಾದ ಚಾಂಡಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ತಿರುವನಂತಪುರ (ಪಿಟಿಐ): ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಪಿಐ (ಎಂ) ಕಾರ್ಯಕರ್ತರು ಸಚಿವಾಲಯಕ್ಕೆ  ಮುತ್ತಿಗೆ ಹಾಕುವುದನ್ನು ತಿಳಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಬೆಳಿಗ್ಗೆ 5 ಗಂಟೆಗೇ ಕಚೇರಿಗೆ ಹಾಜರಾದ ಘಟನೆ ನಡೆದಿದೆ.

ಬೆಲೆ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಸಿಪಿಐ (ಎಂ) ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನೆಗೆ ಮುಂದಾಗಿದ್ದರು. ಇದನ್ನು ತಿಳಿದ ಮುಖ್ಯಮಂತ್ರಿ ಹಾಗೂ ಇತರ ನಾಲ್ವರು ಸಚಿವರು ಎಂಟು ಗಂಟೆಗೆ ನಿಗದಿಪಡಿಸಿದ್ದ ಸಚಿವ ಸಂಪುಟ ಸಭೆಗೆ ಬೆಳಿಗ್ಗೆ 5ಕ್ಕೇ ಹಾಜರಾದರು.
 
ಉಳಿದ ಸಚಿವರು ಬಳಿಕ ಕಾರ್ಯಾಲಯಕ್ಕೆ ಆಗಮಿಸಿದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.