ADVERTISEMENT

ನಾಗಾಲ್ಯಾಂಡ್‌: ಸರ್ಕಾರ ರಚಿಸಲು ರಿಯೊಗೆ ಆಹ್ವಾನ

ಪಿಟಿಐ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ನೆಫಿಯು ರಿಯೊ (ಸಂಗ್ರಹ ಚಿತ್ರ).
ನೆಫಿಯು ರಿಯೊ (ಸಂಗ್ರಹ ಚಿತ್ರ).   

ಕೊಹಿಮಾ: 18 ಶಾಸಕರನ್ನು ಹೊಂದಿರುವ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪೀಪಲ್ಸ್‌ ಪಾರ್ಟಿ (ಎನ್‌ಡಿಪಿಪಿ) ಮುಖ್ಯಸ್ಥ ನೆಫಿಯು ರಿಯೊ ಅವರು ನಾಲ್ಕನೇ ಬಾರಿಗೆ ನಾಗಾಲ್ಯಾಂಡ್‌ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸರ್ಕಾರ ರಚಿಸುವಂತೆ ರಿಯೊ ಅವರಿಗೆ ರಾಜ್ಯಪಾಲ ಪಿ.ಬಿ ಆಚಾರ್ಯ ಮಂಗಳವಾರ ಆಹ್ವಾನ ನೀಡಿದ್ದಾರೆ. ಮಾರ್ಚ್‌ 16 ಅಥವಾ ಅದಕ್ಕೂ ಮೊದಲು ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ.

ರಿಯೊ ಅವರನ್ನು ಬೆಂಬಲಿಸಿ ಬಿಜೆಪಿಯ 12 ಶಾಸಕರು, ಜೆಡಿಯುನ ಒಬ್ಬ ಮತ್ತು ಒಬ್ಬ ಪಕ್ಷೇತರ ಶಾಸಕ ರಾಜ್ಯಪಾಲರಿಗೆ ಪತ್ರ ನೀಡಿದ್ದಾರೆ.

ADVERTISEMENT

ಮುಖ್ಯಮಂತ್ರಿ ರಾಜೀನಾಮೆ
27 ಕ್ಷೇತ್ರಗಳಲ್ಲಿ ಗೆದ್ದಿರುವ ನಾಗಾಲ್ಯಾಂಡ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಎಫ್‌) ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಟಿ.ಆರ್‌. ಜೆಲಿಯಾಂಗ್‌ ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಜೆಪಿಯು ಬೆಂಬಲ ನೀಡಲು ನಿರಾಕರಿಸಿದ ಕಾರಣ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ತನ್ನ ಮಿತ್ರಪಕ್ಷ ಎನ್‌ಡಿಪಿಪಿಗೆ ಬೆಂಬಲ ನೀಡುವುದಾಗಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.