ADVERTISEMENT

ನಾನು ನಿರಪರಾಧಿ - ಕುರಿಯನ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2013, 10:00 IST
Last Updated 5 ಫೆಬ್ರುವರಿ 2013, 10:00 IST
ನಾನು ನಿರಪರಾಧಿ - ಕುರಿಯನ್‌
ನಾನು ನಿರಪರಾಧಿ - ಕುರಿಯನ್‌   

ತಿರುವನಂತಪುರಂ (ಐಎಎನ್‌ಎಸ್): `ದೇವರ ದೃಷ್ಟಿಯಲ್ಲಿ ಹಾಗೂ ನ್ಯಾಯಾಲಯದಲ್ಲಿ ಕೂಡ ನಾನು ನಿರಪರಾಧಿ' - ಇದು 17 ವರ್ಷಗಳ ನಂತರ ಮತ್ತೆ ಮರುಜೀವ ಪಡೆದಿರುವ ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್ ಮಂಗಳವಾರ ನೀಡಿದ ಪ್ರತಿಕ್ರಿಯೆ.

ತಮ್ಮ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಾಗಿರುವ ಸೂರ್ಯನೆಲ್ಲಿ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಅವರು `ಪ್ರಕರಣ ಕುರಿತಂತೆ ಮೂರು ವಿಧದ ಪೊಲೀಸ್ ತನಿಖಾ ತಂಡ ಹಾಗೂ ಸುಪ್ರೀಂ ಕೋರ್ಟ್ ನನ್ನನ್ನು ನಿರಪರಾಧಿ ಎಂದು ಹೇಳಿವೆ. ಅಲ್ಲದೇ, ಕೆರಳ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಾಚಾರಕ್ಕೊಳಗಾದ ಹುಡುಗಿ ಸಲ್ಲಿಸಲಾದ ಖಾಸಗಿ ದೂರಿನ ವಿಚಾರಣೆಯಲ್ಲೂ ಕೂಡ ಖುಲಾಸೆಗೊಂಡಿದ್ದೇನೆ. ದೇವರ ದೃಷ್ಟಿಯಲ್ಲೂ ಕೂಡ ನಾನು ತಪ್ಪು ಮಾಡಿಲ್ಲ' ಎಂದು ಹೇಳಿದರು.

`ಲೋಕಸಭೆ ಚುನಾವಣೆ ಮುಂದಿರುವ ಈ ಸಮಯದಲ್ಲಿ ಮಹಿಳೆಯಿಂದ ಖಾಸಗಿ ದೂರು ದಾಖಲಿಸುವ ಮೂಲಕ ನನ್ನ ಹೆಸರು ಎಳೆತಂದಿರುವುದನ್ನು ನೋಡಿದರೆ ಸಂದೇಹವೇ ಇಲ್ಲ ಇದು ರಾಜಕೀಯ ಹೊರತು ಮತ್ತೆನಲ್ಲ' ಎಂದರು.

1996ರಲ್ಲಿ 42 ಜನರು 16 ವಯಸ್ಸಿನ ಯುವತಿಯನ್ನು ಅಪಹರಿಸಿ ಅವಳ ಮೇಲೆ 45 ದಿನಗಳ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಕುರಿಯನ್ ಅವರ ಹೆಸರು ಕೂಡ ತಳಕು ಹಾಕಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.