ADVERTISEMENT

ನಿಜಾಮರ ಕಾಲದ ವಸ್ತು ಅಪಹರಣ: ಹಸನ್ ಅಲಿ ವಿರುದ್ಧ ಮತ್ತೊಂದು ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಹೈದರಾಬಾದ್ (ಪಿಟಿಐ): ಅಕ್ರಮ ಲೇವಾದೇವಿ ನಡೆಸಿದ ಆರೋಪದ ಮೇಲೆ ಜೈಲಿನಲ್ಲಿರುವ ಹಸನ್ ಅಲಿ ಖಾನ್ ಮತ್ತೊಂದು ಹೊಸ ತೊಂದರೆಯಲ್ಲಿ ಸಿಲುಕಿದ್ದಾನೆ. ಹಿಂದಿನ ಹೈದರಾಬಾದ್‌ನ ನಿಜಾಮರಿಗೆ ಸೇರಿದ್ದೆನ್ನಲಾದ ಪುರಾತನ ವಸ್ತುಗಳನ್ನು  ಹಸನ್ ಅಲಿ ಮತ್ತು ಇತರ ನಾಲ್ವರು ಅಪಹರಿಸಿ ರೂ 50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಹೆಸರಿಸಿರುವ ಹಸನ್ ಅಲಿ ಸಹಚರ ಕೋಲ್ಕತ್ತದ  ವ್ಯಾಪಾರೋದ್ಯಮಿ ಕಾಶಿನಾಥ್  ತಪುರಿಯ ಅವರೂ ಅಕ್ರಮ ಲೇವಾದೇವಿ ಆರೋಪದ ಮೇಲೆ ಜೈಲಿನಲ್ಲಿದ್ದಾರೆ.

ಫಿಲಿಪ್ ಆನಂದರಾಜ್, ನಾಸಿರ್ ಬೇಗ್ ಮತ್ತು ಹೈದರಾಬಾದ್ ಮೂಲದ ಆಭರಣ ಅಂಗಡಿ ಮಾಲೀಕ ರಾಮ್ ಭರೋಜ್ ಗುಪ್ತಾ ಅವರು ಇತರ ಆರೋಪಿಗಳು. ಜಾರಿ ನಿರ್ದೇಶನಾಲಯದ ದೂರಿನ ಮೇರೆಗೆ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ರಾಷ್ಟ್ರದಲ್ಲಿನ ಮೂರನೇ ಅತಿ ದೊಡ್ಡ ವಸ್ತು ಸಂಗ್ರಹಾಲಯ ಸಾಲಾರ್ ಜಂಗ್ ಮ್ಯೂಸಿಯಂನ ಮೇಲ್ವಿಚಾರಕ ನಾಸಿರ್ ಬೇಗ್ ಜತೆ ಮತ್ತು ನಿಜಾಮರ ಕುಟುಂಬಕ್ಕೆ ಸೇರಿದ ಇತರರ ಜತೆ ಹಸನ್ ಅಲಿ ಪಿತೂರಿ ನಡೆಸಿ  ಪುರಾತನ ವಸ್ತುವನ್ನು  ಅಪಹರಿಸಿದ್ದಾನೆ. ಇದನ್ನು  ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.